ಕೇಪ್ಟೌನ್:ದಕ್ಷಿಣ ಆಫ್ರಿಕಾದ ಸ್ಟಾರ್ ಕ್ರಿಕೆಟ್ ಆಟಗಾರ ಎಬಿ ಡಿವಿಲಿಯರ್ಸ್(AB de Villiers retirement) ಎಲ್ಲ ಮಾದರಿಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. 2018ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ 'ಮಿ 360' ಐಪಿಎಲ್(IPL) ಸೇರಿದಂತೆ ವಿವಿಧ ದೇಶಗಳ ಲೀಗ್ಗಳಲ್ಲಿ ಆಡುತ್ತಿದ್ದರು.
ವಿದಾಯದ ಬಗ್ಗೆ ಟ್ವೀಟ್ ಮೂಲಕ ಡಿವಿಲಿಯರ್ಸ್(Villiers) ಅವರು ದೃಢಪಡಿಸಿದ್ದಾರೆ. ಅಲ್ಲದೇ, ಸರಣಿ ಟ್ವೀಟ್ಗಳ ಮೂಲಕ ತಮ್ಮ ಅಭಿಮಾನಿಗಳು, ಸಹ ಆಟಗಾರರು, ವಿವಿಧ ಫ್ರಾಂಚೈಸಿಗಳಿಗೂ ಕೂಡ ಅವರು ಧನ್ಯವಾದ ತಿಳಿಸಿದ್ದಾರೆ.
ಈ ವಿದಾಯದ ಮೂಲಕ ಐಪಿಎಲ್ನಲ್ಲಿ ಆರ್‌ಸಿಬಿ ತಂಡದಲ್ಲಿ ಇನ್ಮುಂದೆ ಎಬಿಡಿ ಕಾಣಿಸಿಕೊಳ್ಳುವುದಿಲ್ಲ. ಟ್ವೀಟ್ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಒಂದು ಯುಗದ ಅಂತ್ಯವಾಗಿದೆ. ನಿಮ್ಮಂತಹ ಚಿಂತನಶೀಲ ವ್ಯಕ್ತಿ ಇನ್ನೊಬ್ಬರಿಲ್ಲ. RCB ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳಲಿದೆ. ನಮ್ಮ ತಂಡಕ್ಕೆ, ಅಭಿಮಾನಿಗಳಿಗೆ ಮತ್ತು ಒಟ್ಟಾರೆಯಾಗಿ ಕ್ರಿಕೆಟ್ ಪ್ರೇಮಿಗಳಿಗೆ ನೀವು ನೀಡಿದ ಕೊಡುಗೆ, ಎಲ್ಲದಕ್ಕೂ, ಧನ್ಯವಾದಗಳು. ಕ್ರಿಕೆಟ್ ದಂತಕಥೆಗೆ ನಿವೃತ್ತಿಯ ಶುಭಾಶಯಗಳು ಎಂದು ತಿಳಿಸಿದೆ.