ಬೆಂಗಳೂರು:ಐಪಿಎಲ್ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಎಲ್ಲಾ ತಂಡದ ಆಟಗಾರರು ತಂಡವನ್ನು ಸೇರಿದ್ದಾರೆ. ಅಂತಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಲೆಜೆಂಡರಿ ಬ್ಯಾಟರ್‌ಗಳಾದ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಸೇರ್ಪಡೆಯಾಗಿದ್ದಾರೆ. ನಾಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ ಇದ್ದು, ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಅವರಿಗೆ ಹಾಲ್ ಆಫ್ ಫೇಮ್ ಗೌರವ ನೀಡಲಾಗುತ್ತಿದೆ.
ವಿರಾಟ್, ಗೇಲ್ ಮತ್ತು ಡಿವಿಲಿಯರ್ಸ್ ಬೆಂಗಳೂರಿಗೆ ಆಗಮಿಸುತ್ತಿರುವುದನ್ನು ಆರ್ಸಿಬಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಹಂಚಿಕೊಂಡಿದೆ. "ಕಾಯುವಿಕೆ ಕೊನೆಗೊಂಡಿದ್ದು ವಿರಾಟ್ ಕೊಹ್ಲಿ ಬೆಂಗಳೂರಿನಲ್ಲಿ!" ಕಿಂಗ್ ಬ್ಯಾಕ್ ಟು ಹೋಮ್ ಎಂದು ಬರೆದುಕೊಂಡಿದೆ. ಆಸ್ಟ್ರೇಲಿಯಾ ಟೂರ್ ಮುಗಿಸಿದ ವಿರಾಟ್ ಆರ್ಸಿಬಿ ಸೇರಿಕೊಂಡಿದ್ದಾರೆ.
"ಮದರ್‌ಶಿಪ್ ಇಳಿದಿದೆ. ನಾವು ಬೆಂಗಳೂರು ನೆಲೆಯಿಂದ ಏಲಿಯನ್ ವರದಿ ಮಾಡುತ್ತಿದ್ದೇವೆ. ಹ್ಯಾಪಿ ಹೋಮ್‌ಕಮಿಂಗ್, ಎಬಿ ಡಿವಿಲಿಯರ್ಸ್"! ಎಂದು ಟ್ವಿಟ್ ಮಾಡಿದೆ. "ಯುನಿವರ್ಸ್ ಬಾಸ್ ತನ್ನ ನೆಚ್ಚಿನ ಮನೆಗೆ ಆಗಮಿಸಿದ್ದಾರೆ. ಮನರಂಜನೆಯು ಅಧಿಕೃತವಾಗಿ ಪ್ರಾರಂಭವಾಗಿದೆ. ಹ್ಯಾಪಿ ಹೋಮ್‌ಕಮಿಂಗ್, ಕ್ರಿಸ್! ಎಂದು ಗೇಲ್ಗೆ ಸ್ವಾಗತಿಸಲಾಗಿದೆ.
ಆರ್ಸಿಬಿ ಅನ್‌ಬಾಕ್ಸ್ ಈವೆಂಟ್ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ತಾರೆಗಳಾದ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್ ಮುಂತಾದವರನ್ನು ತಂಡದ ಮೊದಲ ಅಭ್ಯಾಸದ ಅವಧಿಯಲ್ಲಿ ನೋಡುವ ಅವಕಾಶವನ್ನು ನೀಡಿದೆ. 2023 ರ ಸೀಸನ್‌ಗಾಗಿ ಜರ್ಸಿಯನ್ನು ಸಹ ಈ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಲಾಗುತ್ತದೆ. ಈವೆಂಟ್‌ನಲ್ಲಿ ಆರ್‌ಸಿಬಿಯ ಮೂರು ದೊಡ್ಡ ತಾರೆಗಳಾದ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್‌ನ ಪುನರ್ಮಿಲನವೂ ನಡೆಯಲಿದೆ.