ಕರ್ನಾಟಕ

karnataka

ETV Bharat / sports

50 ವರ್ಷಗಳಿಂದ ಓವಲ್​ನಲ್ಲಿ ಭಾರತಕ್ಕಿಲ್ಲ ಗೆಲುವು.. ಮರುಕಳಿಸುವುದೇ ಗಬ್ಬಾ ವಿಜಯ? - ಓವಲ್​ನಲ್ಲಿ ಭಾರತದ ಕೆಟ್ಟ ದಾಖಲೆ

ಭಾರತ ತಂಡ 1971ರ ಪ್ರವಾಸದಲ್ಲಿ ಕೊನೆಯ ಬಾರಿ ಆಂಗ್ಲರಿಗೆ ಸೋಲುಣಿಸಿತ್ತು. ಅಜಿತ್ ವಾಡೇಕರ್​ ನಾಯಕತ್ವದಲ್ಲಿ ಇಂಗ್ಲೆಂಡ್​ ಪ್ರವಾಸ ಕೈಗೊಂಡಿದ್ದ ಭಾರತ 4 ವಿಕೆಟ್​ಗಳಿಂದ ಮಣಿಸಿತ್ತು. ಇಂಗ್ಲೆಂಡ್​ ಮೊದಲ ಇನ್ನಿಂಗ್ಸ್​ನಲ್ಲಿ 355 ಮತ್ತು 2ನೇ ಇನಿಂಗ್ಸ್​ನಲ್ಲಿ 101 ರನ್​ಗಳಿಸಿತ್ತು. ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 284 ಮತ್ತು ಎರಡನೇ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್ ನೀಡಿದ್ದ 173 ರನ್​ಗಳ ಟಾರ್ಗೆಟ್​ ಅನ್ನು ಯಶಸ್ವಿಯಾಗಿ ಬೆನ್ನಟ್ಟಿ ಜಯ ಸಾಧಿಸಿತ್ತು.

ಭಾರತ vs ಇಂಗ್ಲೆಂಡ್​ ಟೆಸ್ಟ್​
ಭಾರತ vs ಇಂಗ್ಲೆಂಡ್​ ಟೆಸ್ಟ್​

By

Published : Sep 2, 2021, 7:02 AM IST

ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್​ ಪಂದ್ಯ ಗುರುವಾರದಿಂದ ಆರಂಭವಾಗಲಿದೆ. 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಈಗಾಗಲೇ ಎರಡು ತಂಡಗಳು ತಲಾ ಒಂದರಲ್ಲಿ ಜಯ ಸಾಧಿಸಿದ್ದು, ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸುವ ಇರಾದೆಯಲ್ಲಿವೆ.

ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರೆ, 2ನೇ ಪಂದ್ಯದಲ್ಲಿ ಭಾರತ 151 ರನ್​ಗಳಿಂದ ಗೆದ್ದು ಬೀಗಿತ್ತು. ಆದರೆ, 3ನೇ ಟೆಸ್ಟ್​ನಲ್ಲಿ ತಿರುಗೇಟು ನೀಡಿದ ಆತಿಥೇಯರು ಇನ್ನಿಂಗ್ಸ್ ಮತ್ತು 76 ರನ್​ಗಳಿಂದ ಗೆದ್ದು ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿದ್ದರು. ಇದೀಗ ಓವಲ್​ನಲ್ಲಿ 4ನೇ ಟೆಸ್ಟ್​ ಇಂದಿನಿಂದ ಆರಂಭವಾಗಲಿದ್ದು, ಎಲ್ಲರ ಗಮನ ಓವಲ್​ನತ್ತ ತಿರುಗಿದೆ.

ಓವಲ್​ನಲ್ಲಿ ಭಾರತಕ್ಕೆ 13 ಟೆಸ್ಟ್​ ಪಂದ್ಯಗಳಲ್ಲಿ ಸಿಕ್ಕಿರುವುದು ಒಂದೇ ಜಯ!

ಭಾರತ ಮತ್ತು ಇಂಗ್ಲೆಂಡ್​ ಇಲ್ಲಿಯವರೆಗೆ 13 ಟೆಸ್ಟ್​ಗಳಲ್ಲಿ ಮುಖಾಮುಖಿಯಾಗಿದ್ದು, ಇದರಲ್ಲಿ ಆತಿಥೇಯ ತಂಡ 5ರಲ್ಲಿ ಜಯ ಸಾಧಿಸಿದ್ದರೆ, ಭಾರತ ತಂಡ ಕೇವಲ ಒಂದರಲ್ಲಿ ಜಯ ಸಾಧಿಸಿದೆ. 7 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.

1971ರಲ್ಲಿ ಭಾರತಕ್ಕೆ ಜಯ, ಅಲ್ಲಿಂದ ಬರೀ ಸೋಲು!
ಭಾರತ ತಂಡ 1971ರ ಪ್ರವಾಸದಲ್ಲಿ ಕೊನೆಯ ಬಾರಿ ಆಂಗ್ಲರಿಗೆ ಸೋಲುಣಿಸಿತ್ತು. ಅಜಿತ್ ವಾಡೇಕರ್​ ನಾಯಕತ್ವದಲ್ಲಿ ಇಂಗ್ಲೆಂಡ್​ ಪ್ರವಾಸ ಕೈಗೊಂಡಿದ್ದ ಭಾರತ 4 ವಿಕೆಟ್​ಗಳಿಂದ ಮಣಿಸಿತ್ತು. ಇಂಗ್ಲೆಂಡ್​ ಮೊದಲ ಇನ್ನಿಂಗ್ಸ್​ನಲ್ಲಿ 355 ಮತ್ತು 2ನೇ ಇನಿಂಗ್ಸ್​ನಲ್ಲಿ 101 ರನ್​ಗಳಿಸಿತ್ತು. ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 284 ಮತ್ತು ಎರಡನೇ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್ ನೀಡಿದ್ದ 173 ರನ್​ಗಳ ಟಾರ್ಗೆಟ್​ ಅನ್ನು ಯಶಸ್ವಿಯಾಗಿ ಬೆನ್ನತ್ತಿ ಜಯ ಸಾಧಿಸಿತ್ತು.

ನಂತರ 1982, 1990, 2002, 2007ರಲ್ಲಿ ನಡೆದ ಟೆಸ್ಟ್​ ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದ್ದವು. ಆದರೆ, 2011ರ ಪ್ರವಾಸದಲ್ಲಿ ಭಾರತ ತಂಡ ಇನ್ನಿಂಗ್ಸ್​ ಮತ್ತು 8 ರನ್​, 2014ರಲ್ಲಿ ಇನ್ನಿಂಗ್ಸ್​ ಮತ್ತು 244 ರನ್​ ಹಾಗೂ 2018ರಲ್ಲಿ 118 ರನ್​ಗಳ ಸೋಲು ಕಂಡಿದೆ.

ಕಳೆದ ಮೂರು ಪ್ರವಾಸದಲ್ಲಿ ಹೀನಾಯ ಸೋಲು ಕಂಡಿರುವ ಭಾರತ ತಂಡದ ವಿರುದ್ಧ ಈ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ, ಭಾರತ ಕಳೆದ 2-3 ವರ್ಷಗಳಿಂದ ವಿದೇಶಗಳಲ್ಲಿ ಅಚ್ಚರಿಯ ಜಯ ಸಾಧಿಸಿದ ದಾಖಲೆ ಹೊಂದಿದೆ. 32 ವರ್ಷಗಳಿಂದ ಗಬ್ಬಾದಲ್ಲಿ ಸೋಲೇ ಕಾಣದಿದ್ದ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ್ದಲ್ಲದೇ ಸರಣಿಯನ್ನು ಗೆದ್ದು ತೋರಿಸಿದೆ. ಹಾಗಾಗಿ ಇಂದಿನ ಪಂದ್ಯ ಎರಡು ತಂಡಗಳ ಅಭಿಮಾನಿಗಳಿಗೆ ಹಬ್ಬವನ್ನುಂಟು ಮಾಡಲಿದೆ.

ಇದನ್ನು ಓದಿ:4ನೇ ಟೆಸ್ಟ್​: ಹೀನಾಯ ಸೋಲು ಮರೆತು ತಿರುಗಿ ಬೀಳುವ ಉತ್ಸಾಹದಲ್ಲಿ ಭಾರತ, ಅಶ್ವಿನ್ ಆಟ ನಿರೀಕ್ಷೆ

ABOUT THE AUTHOR

...view details