ಕರ್ನಾಟಕ

karnataka

ETV Bharat / sports

ಸುಶೀಲ್ ಕುಮಾರ್​ಗೂ ಮುನ್ನ ಅಪರಾದ ಪ್ರಕರಣಗಳಲ್ಲಿ ಜೈಲು ಸೇರಿದ ಖ್ಯಾತ ಕ್ರೀಡಾಪಟುಗಳು ಇವರೇ ನೋಡಿ...

ವಿಶ್ವಾದ್ಯಂತ ಕೆಲವು ಜನಪ್ರಿಯ ಕ್ರಿಕೆಟಿಗರು ವಿವಿಧ ಕಾರಣಗಳಿಗಾಗಿ ಕಂಬಿ ಹಿಂದೆ ಹೋಗಿ ಬಂದಿದ್ದಾರೆ..

ಬೇಡವಾದ ಕಾರಣಕ್ಕೆ ಕಂಬಿ ಏಣಿಸಿದ ಸ್ಟಾರ್​ ಕ್ರಿಕೆಟಿಗರಿವರು
ಬೇಡವಾದ ಕಾರಣಕ್ಕೆ ಕಂಬಿ ಏಣಿಸಿದ ಸ್ಟಾರ್​ ಕ್ರಿಕೆಟಿಗರಿವರು

By

Published : May 25, 2021, 2:17 PM IST

Updated : May 25, 2021, 8:48 PM IST

ಹೈದರಾಬಾದ್​ :ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಕುಸ್ತಿ ಪಟು ಕೊಲೆ ಪ್ರಕರಣದಲ್ಲಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಇವರ ಜೊತೆಯಿದ್ದ ಅಜಯ್ ಕುಮಾರ್ನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ವಿಶ್ವಾದ್ಯಂತ ಕೆಲವು ಜನಪ್ರಿಯ ಕ್ರಿಕೆಟಿಗರು ವಿವಿಧ ಕಾರಣಗಳಿಗಾಗಿ ಕಂಬಿ ಹಿಂದೆ ಹೋಗಿ ಬಂದಿದ್ದಾರೆ.

1) ಸುರೇಶ್ ರೈನಾ : ಟೀಂ​ ಇಂಡಿಯಾದ ಒಂದು ಕಾಲದ ಬೆಸ್ಟ್​ ಆಲ್​ ರೌಂಡರ್. ಮಿಸ್ಟರ್ ಐಪಿಎಲ್​ ಎಂದು ಬಿರುದು ಪಡೆದಿರುವ ರೈನಾ ಅವರನ್ನು ಕೂಡ ಕಳೆದ ವರ್ಷ ಬಂಧನ ಮಾಡಲಾಗಿತ್ತು.

ಸುರೇಶ್​ ರೈನಾ ಕೋವಿಡ್​-19 ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಮುಂಬೈ ಪೊಲೀಸರು ಬಂಧಿಸಿದ್ದರು. ಮಹಾರಾಷ್ಟ್ರದಲ್ಲಿ ರಾತ್ರಿ ವೇಳೆ ಕರ್ಫ್ಯೂ ಇದ್ದರೂ ಕೋವಿಡ್ ನಿಯಮವನ್ನು ಗಾಳಿಗೆ ತೂರಿ ಮುಂಬೈ ಡ್ರಾಗನ್ ಫ್ಲೈ ಕ್ಲಬ್​ನ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಕ್ಕೆ ರೈನಾ ಸೇರಿ 34 ಮಂದಿಯನ್ನು ಬಂಧಿಸಲಾಗಿತ್ತು.

ಸುರೇಶ್ ರೈನಾ, ನಟ ಹೃತಿಕ್ ರೋಷನ್ ಪತ್ನಿ ಸುಸೇನ್ ಖಾನ್ ಮತ್ತು ಗಾಯಕ ಗುರು ರಾಂಧವ ಜಾಮೀನಿನ ಮೇಲೆ ಹೊರ ಬಂದಿದ್ದರು. ಬಂಧಿತರ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 188, 269, 34ರಡಿ ಬಾಂಬೆ ಪೊಲೀಸ್ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗ ಕಾಯ್ದೆಗಳ ಅಡಿ ಪ್ರಕರಣಗಳು ದಾಖಲಾಗಿದ್ದವು.

ವಾಸಿಂ ಅಕ್ರಂ : ಪಾಕಿಸ್ತಾನ ತಂಡದ ಮಾಜಿ ಆಟಗಾರ, ಲೆಜೆಂಡರಿ ಬೌಲರ್​ ವಾಸಿಂ ಅಕ್ರಂ ಅಕ್ರಮ ಗಾಂಜಾ ಸಂಗ್ರಹಣೆ ಪ್ರಕರಣದಲ್ಲಿ ಬಂಧನವಾಗಿದ್ದರು.

1993ರಲ್ಲಿ ಪಾಕಿಸ್ತಾನ ತಂಡವು ವೆಸ್ಟ್​ ಇಂಡೀಸ್ ಪ್ರವಾಸ ಕೈಗೊಂಡಾಗ ವಾಕರ್ ಯೂನಿಸ್ ಮತ್ತು ಆಕಿಬ್ ಜಾವೇದ್ ಅವರೊಂದಿಗೆ ವಾಸಿಂ ಅಕ್ರಂ ಅಕ್ರಮವಾಗಿ ಹೋಟೆಲ್​ನಿಂದ ಹೊರ ಬಂದು ಬೀಚ್​ನಲ್ಲಿ ಅನಾಮಿಕ ವ್ಯಕ್ತಿಯ ಜೊತೆ ಗಾಂಜಾ ಪಡೆದು ಸೇವಿಸಿದ್ದರು ಎನ್ನುವ ಆರೋಪದಲ್ಲಿ ಈ ಮೂವರನ್ನ ಬಂಧನ ಮಾಡಲಾಗಿತ್ತು.

ಪ್ರವೀಣ್ ಕುಮಾರ್ :ಮೈದಾನದಲ್ಲಿ ಮತ್ತು ಮೈದಾನದ ಹೊರಗೆ ತಮ್ಮ ಅಗ್ರೇಸಿವ್​ನೆಸ್​ನಿಂದ ಹೆಚ್ಚು ಹೆಸರಾದವರು ಪ್ರವೀಣ್ ಕುಮಾರ್. 2019ರಲ್ಲಿ ಬಸ್​​ ಚಾಲಕನ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಇವರನ್ನ ಬಂಧನ ಮಾಡಲಾಗಿತ್ತು.

ಮದ್ಯದ ಅಮಲಿನಲ್ಲಿ ಮಗ ಹಾಗೂ ನೆರೆಹೊರೆಯವರು ಸಹಾಯದಿಂದ ಬಸ್​ ಡ್ರೈವರ್​ ಮೇಲೆ ಹಲ್ಲೆ ಮಾಡಿದ್ದರು. ಆದರೆ, ಈ ಆರೋಪವನ್ನ ಅಲ್ಲಗಳದಿದ್ದ ಪ್ರವೀಣ್​ ಕುಮಾರ್​, ಅವನು ನನ್ನ ಕುತ್ತಿಗೆಯಲ್ಲಿರುವ ಚೈನ್​ ಕದಿಯಲು ಬಂದಿದ್ದ. ಆಗ ನಾನು ನನ್ನ ರಕ್ಷಣೆಗೆ ದಾಳಿ ಮಾಡಿದ್ದು ಎಂದಿದ್ದರು.

ವಿನೋದ್ ಕಾಂಬ್ಳೆ : 2015ರಲ್ಲಿ ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ವಿನೋದ್ ಕಾಂಬ್ಳೆ ಮೇಲೆ ಅವರದೇ ಮನೆ ಕೆಲಸ ಮಾಡುವ ಹೆಣ್ಣು ಮಗಳು ಪ್ರಕರಣ ದಾಖಲಿಸಿದ್ದರು. ಸೋನಿ ನಫೆಸಿನ್ಹ್ ಸರ್ಸಲ್ ಎಂಬ ಮಹಿಳೆ ಕಾಂಬ್ಳೆ ನಿವಾಸದಲ್ಲಿ ಮನೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಳು.

ಕಾಂಬ್ಳೆ ಮತ್ತು ಅವನ ಹೆಂಡತಿ ತನ್ನನ್ನು ಮನೆಗೆ ಮರಳಲು ಬಿಡುತ್ತಿಲ್ಲ, ಸಂಬಳ ಕೇಳಿದರೆ ಹಿಂಸೆ ನೀಡುತ್ತಿದ್ದಾರೆ, ಮೂರು ದಿನಗಳ ಕಾಲ ನನಗೆ ಉೂಟ, ನೀರು ಏನನ್ನೂ ಕೊಡದೆ ರೂಮ್‌ನಲ್ಲಿ ಕೂಡಿ ಹಾಕಿದ್ದರು ಎಂದು ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಕಾಂಬ್ಳೆ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

ಅಮಿತ್ ಮಿಶ್ರಾ :ಬಾಲಿವುಡ್ ಚಿತ್ರ ನಿರ್ಮಾಪಕಿ, ಗೆಳತಿ ವಂದನಾ ಜೈನ್ ಅವರ ಮೇಲೆ ದೈಹಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಕ್ರಿಕೆಟಿಗ ಅಮಿತ್ ಮಿಶ್ರಾ ಅವರನ್ನು ಪೊಲೀಸರು ಬಂಧಿಸಿ, ವಿಚಾರಣೆ ಬಳಿಕ ಬಿಡುಗಡೆ ಮಾಡಿದ್ದರು.

ತಮ್ಮ ಮೇಲೆ ಅಮಿತ್ ಮಿಶ್ರಾ ಹಲ್ಲೆ ಮಾಡಿದ್ದಾರೆ ಎಂದು ಬಾಲಿವುಡ್ ಚಿತ್ರ ನಿರ್ಮಾಪಕಿ ವಂದನಾ ಜೈನ್ ಅವರು ಆರೋಪಿಸಿದ್ದರು. ಅಲ್ಲದೆ ಈ ಬಗ್ಗೆ ಬೆಂಗಳೂರಿನ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಪೊಲೀಸರು ಕ್ರಿಕೆಟಿಗ ಅಮಿತ್ ಮಿಶ್ರಾ ಅವರನ್ನು ಬಂಧಿಸಿ ಠಾಣೆಗೆ ಕರೆ ತಂದಿದ್ದರು. ಮಿಶ್ರಾ ವಿರುದ್ಧ ಐಪಿಸಿ ಸೆಕ್ಷನ್ 323, 324 ಮತ್ತು 354ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸತತ 3 ಗಂಟೆಗಳ ವಿಚಾರಣೆ ಬಳಿಕ ಅವರನ್ನು ಬಂಧಿಸಿದ ಪೊಲೀಸರು, ಠಾಣಾ ಜಾಮೀನು ಮಂಜೂರು ಬಿಡುಗಡೆ ಮಾಡಿದ್ದಾರೆ.

ನವಜ್ಯೋತ್ ಸಿಂಗ್​ ಸಿಧು:

ಭಾರತ ತಂಡದ ಮಾಜಿ ಕ್ರಿಕೆಟಿಗರ ನವಜ್ಯೋತ್​ ಸಿಂಗ್ ಸಿಧು 1988 ರ ಡಿಸೆಂಬರ್ 27 ರಂದು ಪಟಿಯಾಲ ನಿವಾಸಿ ಗುರ್ನಮ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿ ಸಾವಿಗೆ ಕಾರಣವಾದ ಕಾರಣಕ್ಕಾಗಿ ಭಾರತದ ಮಾಜಿ ಆರಂಭಿಕ ಆಟಗಾರನನ್ನು 1991 ರಲ್ಲಿ ಪಂಜಾಬ್ ಪೊಲೀಸರು ಬಂಧಿಸಿದ್ದರು. ಕೊಲೆ ಪ್ರಕರಣದಲ್ಲಿ ಅವರು ತಪ್ಪಿತಸ್ಥರೆಂದು ಸಾಬೀತಾಗಿದ್ದರಿಂದ, ಸಿಧು ಅವರಿಗೆ ಅಪರಾಧಿ ನರಹತ್ಯೆ ಪ್ರಕರಣಕ್ಕೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ನಂತರ ಅವರು ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಇವರಲ್ಲದೆ ಮ್ಯಾಚ್​ ಫಿಕ್ಸಿಂಗ್ ಪ್ರಕರಣದಲ್ಲಿ ಎಸ್​ ಶ್ರೀಶಾಂತ್​(2013), ಗ್ಯಾಂಗ್​ಸ್ಟಾರ್ ಒಬ್ಬ ತಪ್ಪಿಸಿಕೊಳ್ಳಲು ನೆರವಾಗಿದ್ದ ಪ್ರಕರಣದಲ್ಲಿ ಬಾಕ್ಸರ್ ದೀಪಕ್ ಪಹಲ್(2011), ಹಲ್ಲೆ ಮತ್ತು ಲಂಚ ಪ್ರಕರಣದಲ್ಲಿ ಬಾಕ್ಸರ್​ ಜೈ ಭಗವಾನ್(2015)​, ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಸ್ನೋಶೂ ರೇಸರ್ ತನ್ವೀರ್​ ಹುಸೇನ್(2017) ಬಂಧನಕ್ಕೊಳಗಾಗಿದ್ದರು.

Last Updated : May 25, 2021, 8:48 PM IST

ABOUT THE AUTHOR

...view details