ಸೌತಾಂಪ್ಟನ್: ಆಸ್ಟ್ರೇಲಿಯಾದಲ್ಲಿ 2020-21ರ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಗೆದ್ದಿರುವುದು ಟೀಮ್ ಇಂಡಿಯಾಗೆ ವಿಭಿನ್ನವಾದ ಆತ್ಮವಿಶ್ವಾಸವನ್ನು ತುಂಬಿದೆ ಎಂದು ವೇಗಿ ಇಶಾಂತ್ ಶರ್ಮಾ ಹೇಳಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧ ಇದೇ ತಿಂಗಳು ಇಂಗ್ಲೆಂಡ್ನಲ್ಲಿ ನಡೆಯುವ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲೂ ಅದೇ ವಿಶ್ವಾಸದಿಂದ ಆಡುವುದಾಗಿ ಅವರು ತಿಳಿಸಿದ್ದಾರೆ.
ಜೂನ್ 18ರಂದು ಸೌತಾಂಪ್ಟನ್ನ ಏಜಿಯಸ್ ಬೌಲ್ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ನಡೆಯಲಿದೆ. ಈ ವರ್ಷದ ಆರಂಭದಲ್ಲಿ ಗಾಯದಿಂದ ಪೆಟ್ಟು ತಿಂದಿದ್ದ ಭಾರತ ತಂಡ ಅನನುಭವಿಗಳ ನೆರವಿನಿಂದಲೇ ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ 2-1ರಲ್ಲಿ ಸರಣಿ ಜಯಿಸಿತ್ತು. ಅದರಲ್ಲೂ 32 ವರ್ಷಗಳಿಂದ ಸೋಲೇ ಕಾಣದ ಗಬ್ಬಾದಲ್ಲಿ ಆಸೀಸ್ ತಂಡಕ್ಕೆ ಭಾರತ ಸೋಲುಣಿಸಿತ್ತು.
ಇದೊಂದು ಪ್ರಯೋಗಾತ್ಮಕ ಮತ್ತು ಭಾವನಾತ್ಮಕ ಪಯಣ, ಈ ಐಸಿಸಿ ಟೂರ್ನಮೆಂಟ್ 50 ಓವರ್ಗಳ ಏಕದಿನ ವಿಶ್ವಕಪ್ಗೆ ಮಹತ್ವವನ್ನು ಹೊಂದಿದೆ. ಇದು ಕೇವಲ ಒಂದು ತಿಂಗಳ ಪರಿಶ್ರಮದ ಫಲಿತಾಂಶವಲ್ಲ. ಇದರಲ್ಲಿ ನಮ್ಮ ಎರಡು ವರ್ಷಗಳ ಬೆವರು ಮತ್ತು ಕಠಿಣ ಪರಿಶ್ರಮವಿದೆ ಎಂದು ವಿರಾಟ್ ಕೊಹ್ಲಿ ಈಗಾಗಲೆ ಹೇಳಿದ್ದಾರೆ.