ಕರ್ನಾಟಕ

karnataka

ETV Bharat / sports

24 ವರ್ಷಗಳ ವೃತ್ತಿ ಜೀವನದಲ್ಲೇ ನನ್ನ ಅತ್ಯುತ್ತಮ ದಿನ ಅದು : ಸಚಿನ್ ತೆಂಡೂಲ್ಕರ್​

2011ರಲ್ಲಿ ಮುಂಬೈನ ವಾಂಖೆಡೆಯಲ್ಲಿ ಅದು ನೆರೆವೇರಿತು.ಆ ದಿನ ನನ್ನ ಪಾಲಿನ ನಂಬಲಸಾಧ್ಯವಾಗಿತ್ತು. ಅದು ನನ್ನ ಕ್ರಿಕೆಟ್​ ಜೀವನದ ಅತ್ಯುತ್ತಮ ದಿನವಾಗಿತ್ತು. ಅದು ಇಡೀ ದೇಶವೇ ಒಟ್ಟಾರೆ ಸಂಭ್ರಮಿಸಿದ ಕೆಲವು ದಿನಗಳಲ್ಲಿ ಒಂದಾಗಿತ್ತು..

2011ರ ಏಕದಿನ  ವಿಶ್ವಕಪ್​
2011ರ ಏಕದಿನ ವಿಶ್ವಕಪ್​

By

Published : May 16, 2021, 8:16 PM IST

ನವದೆಹಲಿ :ಭಾರತ ತಂಡದ ಲೆಜೆಂಡರಿ ಬ್ಯಾಟ್ಸ್​ಮನ್ ಸಚಿನ್​ ತೆಂಡೂಲ್ಕರ್ ​2011ರ ಏಕದಿನ ವಿಶ್ವಕಪ್​ ಗೆದ್ದ ದಿನವನ್ನು ವೃತ್ತಿ ಜೀವನದ ಅತ್ಯುತ್ತಮ ದಿನ. ಅಂದು ನನ್ನ ಬಹುದೊಡ್ಡ ಕನಸು ನನಸಾಗಿತ್ತು ಎಂದು ಸಚಿನ್ ತೆಂಡೂಲ್ಕರ್​ ಹೇಳಿಕೊಂಡಿದ್ದಾರೆ.

2011ರ ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡ ಶ್ರೀಲಂಕಾವನ್ನು ಮಣಿಸಿ ಬರೋಬ್ಬರಿ 28 ವರ್ಷಗಳ ಬಳಿಕ 50 ಓವರ್​ಗಳ ವಿಶ್ವಕಪ್​ ಎತ್ತಿ ಹಿಡಿದಿತ್ತು.

ಹಿಂದೆ 5 ವಿಶ್ವಕಪ್​ಗಳಲ್ಲಿ ಆಡಿದ್ದ ಸಚಿನ್​ಗೆ ಅದು ಕೊನೆಯ ವಿಶ್ವಕಪ್​ ಆಗಿತ್ತು. ಕೊನೆಗೂ ಧೋನಿ ನೇತೃತ್ವದ ಭಾರತ ತಂಡ ವಿಶ್ವಕಪ್​ ಗೆದ್ದು ಕ್ರಿಕೆಟ್​ ದೇವರ ವಿಶ್ವಕಪ್​ ಕನಸನ್ನು ನನಸಾಗಿಸಿತ್ತು.

2011ರ ವಿಶ್ವಕಪ್​

ಕಪಿಲ್ ದೇವ್​ 1983ರಲ್ಲಿ ವಿಶ್ವಕಪ್​ ಎತ್ತಿ ಹಿಡಿದಿದ್ದನ್ನು ನೋಡಿದಾಗ ನನಗೆ ನಂಬಲಸಾಧ್ಯವಾದ ರೋಮಾಂಚನಕಾರಿ ಅನುಭವಾಗಿತ್ತು. ನಾನು ನನ್ನ ಸ್ನೇಹಿತರ ಜೊತೆ ಆ ದಿನವನ್ನು ಆನಂದಿಸಿದ್ದೆ.

ಅಲ್ಲದೆ ನಾನು ಕೂಡ ವಿಶ್ವಕಪ್​ ಎತ್ತಿ ಹಿಡಿಯುವ ಕನಸನ್ನು ಎತ್ತಿ ಹಿಡಿಯಬೇಕೆಂದು ಬಯಸಿದ್ದೆ. ಏನಾದರೂ ಬರಲಿ ನಾನು ನನ್ನ ಕನಸಾದ ವಿಶ್ವಕಪ್​​ ಎತ್ತಿ ಹಿಡಿಯುವ ಕನಸನ್ನು ಹಿಂಬಾಲಿಸುವುದರ ಕಡೆಗೆ ಹೆಚ್ಚು ಗಮನ ನೀಡಿದೆ.

2011ರಲ್ಲಿ ಮುಂಬೈನ ವಾಂಖೆಡೆಯಲ್ಲಿ ಅದು ನೆರೆವೇರಿತು.ಆ ದಿನ ನನ್ನ ಪಾಲಿನ ನಂಬಲಸಾಧ್ಯವಾಗಿತ್ತು. ಅದು ನನ್ನ ಕ್ರಿಕೆಟ್​ ಜೀವನದ ಅತ್ಯುತ್ತಮ ದಿನವಾಗಿತ್ತು.

ಅದು ಇಡೀ ದೇಶವೇ ಒಟ್ಟಾರೆ ಸಂಭ್ರಮಿಸಿದ ಕೆಲವು ದಿನಗಳಲ್ಲಿ ಒಂದಾಗಿತ್ತು ಎಂದು ಸಚಿನ್ ಅನ್​ ಅಕಾಡೆಮಿ ಆಯೋಜಿಸಿದ್ದ ಆನ್​ಲೈನ್​ ಸಂವಾದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ:ಕೊಹ್ಲಿ ಪರ ಪರ ಮಾತನಾಡಿದ ಪಾಕ್​ ಕ್ರಿಕೆಟರ್​ಗೆ ಫಿಕ್ಸರ್ ಎಂದು ಹೀಯಾಳಿಸಿದ ಮೈಕಲ್ ವಾನ್​

ABOUT THE AUTHOR

...view details