ಬೆಂಗಳೂರು: ಐಪಿಎಲ್ 2022ರ ಎರಡು ದಿನಗಳ ಮೆಗಾ ಹರಾಜು ಯಶಸ್ವಿಯಾಗಿ ಮುಗಿದೆ. ಹರಾಜಿನಲ್ಲಿದ್ದ 600 ಆಟಗಾರರಲ್ಲಿ ಒಟ್ಟು 67 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 204 ಕ್ರಿಕೆಟಿಗರನ್ನು 551.7 ಕೋಟಿ ರೂ ಖರ್ಚು ಮಾಡಿ 10 ತಂಡಗಳು ಖರೀದಿಸಿವೆ.
ಮುಂಬೈ ಇಂಡಿಯನ್ಸ್ ಭಾರತದ ಉದಯೋನ್ಮುಖ ಕ್ರಿಕೆಟಿಗರ ಇಶಾನ್ ಕಿಶನ್ರನ್ನು 15.5 ಕೋಟಿ ರೂ ನೀಡಿ ಖರೀದಿ ಮಾಡುವ ಮೂಲಕ ಈ ವರ್ಷದ ಗರಿಷ್ಠ ಬೆಲೆ ಪಡೆದ ಕ್ರಿಕೆಟಿಗನಾದರು. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ವೇಗಿ ದೀಪಕ್ ಚಾಹರ್ರನ್ನು 14 ಕೋಟಿ ರೂ ನೀಡಿ ಖರೀದಿಸಿತು. ಈ ಇಬ್ಬರು ಆಟಗಾರರು ಈ ಹಿಂದೆ ಕೂಡ ಅದೇ ಫ್ರಾಂಚೈಸಿಗೆ ಆಡಿದ್ದರು.
ಇನ್ನು ವಿದೇಶಿ ಆಟಗಾರರಲ್ಲಿ ಇಂಗ್ಲೆಂಡ್ ಆಲ್ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್, ವೆಸ್ಟ್ ಇಂಡೀಸ್ನ ವಿಕೆಟ್ ಕೀಪರ್ ನಿಕೋಲಸ್ ಪೂರನ್ ಮತ್ತು ಶ್ರೀಲಂಕಾದ ವನಿಡು ಹಸರಂಗ ತಲಾ 10.75 ಕೋಟಿ ರೂ ಪಡೆದುಕೊಂಡರು.
ಇನ್ನು ಕರ್ನಾಟಕದಿಂದ ಹರಾಜುಪಟ್ಟಿಯಲ್ಲಿ 28 ಆಟಗಾರರು ಅವಕಾಶ ಪಡೆದುಕೊಂಡಿದ್ದರು. ಒಟ್ಟು ಹರಾಜಿಗೂ ಮುನ್ನ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ರಿಟೈನ್ ಆಗಿದ್ದರು. ಹರಾಜಿನಲ್ಲಿ 14 ಆಟಗಾರರನ್ನು ಫ್ರಾಂಚೈಸಿಗಳು ಖರೀದಿಸಿವೆ. 10 ತಂಡಗಳಿಂದ ಒಟ್ಟು 551.7 ಕೋಟಿ ರೂ ಖರ್ಚು ಮಾಡಿದ್ದು, ಇದರಲ್ಲಿ ಕರ್ನಾಟಕ ಆಟಗಾರರಿಗೆ ಶೇ. 9.2 ರಷ್ಟು ಅಂದರೆ 66.6 ಕೋಟಿ ರೂ.ಗಳನ್ನು ವ್ಯಯಿಸಿವೆ.
2022ರ ಐಪಿಎಲ್ನಲ್ಲಿ ಕರ್ನಾಟಕ ಆಟಗಾರರು ಪಡೆದ ಮೊತ್ತ ಮತ್ತು ತಂಡಗಳು
- ಕೆ.ಎಲ್ ರಾಹುಲ್ -17 ಕೋಟಿ ರೂ. -ಲಖನೌ ಸೂಪರ್ ಜಯಂಟ್ಸ್
- ಮಯಾಂಕ್ ಅಗರ್ವಾಲ್ - 12 ಕೋಟಿ ರೂ.--ಪಂಜಾಬ್ ಕಿಂಗ್ಸ್
- ಪ್ರಸಿಧ್ ಕೃಷ್ಣ-10 ಕೋಟಿ ರೂ.-ರಾಜಸ್ಥಾನ್ ರಾಯಲ್ಸ್
- ದೇವದತ್ ಪಡಿಕ್ಕಲ್- 7.75 ಕೋಟಿ ರೂ. - ರಾಜಸ್ಥಾನ್ ರಾಯಲ್ಸ್
- ಮನೀಶ್ ಪಾಂಡೆ - 4.6 ಕೋಟಿ ರೂ.-ಲಖನೌ ಸೂಪರ್ ಜಯಂಟ್ಸ್
- ಅಭಿನವ್ ಮನೋಹರ್-2.6 ಕೋಟಿ ರೂ. -ಗುಜರಾತ್ ಟೈಟನ್ಸ್
- ರಾಬಿನ್ ಉತ್ತಪ್ಪ -2 ಕೋಟಿ ರೂ. -ಚೆನ್ನೈ ಸೂಪರ್ ಕಿಂಗ್ಸ್
- ಕರುಣ್ ನಾಯರ್- 1.40 ಕೋಟಿ ರೂ.-ರಾಜಸ್ಥಾನ್ ರಾಯಲ್ಸ್
- ಕೃಷ್ಣಪ್ಪ ಗೌತಮ್- 90 ಲಕ್ಷ ರೂ.-ಲಖನೌ ಸೂಪರ್ ಜಯಂಟ್ಸ್
- ಪ್ರವೀಣ್ ದುಬೇ -50 ಲಕ್ಷ ರೂ.-ಡೆಲ್ಲಿ ಕ್ಯಾಪಿಟಲ್ಸ್
- ಶ್ರೇಯಸ್ ಗೋಪಾಲ್- 75 ಲಕ್ಷ ರೂ.-ಸನ್‌ರೈಸರ್ಸ್ ಹೈದರಾಬಾದ್
- ಕೆ.ಸಿ ಕಾರಿಯಪ್ಪ -30 ಲಕ್ಷ ರೂ.-ರಾಜಸ್ಥಾನ್ ರಾಯಲ್ಸ್
- ರವಿಕುಮಾರ್ ಸಮರ್ಥ್-20 ಲಕ್ಷ ರೂ.-ಸನ್‌ರೈಸರ್ಸ್ ಹೈದರಾಬಾದ್
- ಜಗದೀಶ ಸುಚಿತ್-20 ಲಕ್ಷ ರೂ.-ಸನ್‌ರೈಸರ್ಸ್ ಹೈದರಾಬಾದ್
- ಅನೀಶ್ವರ್ ಗೌತಮ್ -20 ಲಕ್ಷ ರೂ.-ರಾಯಲ್ ಚಾಲೆಂಜರ್ಸ್ ಬೆಂಗಳೂರು
- ಲವನೀತ್ ಸಿಸೋಡಿಯ- 20 ಲಕ್ಷ ರೂ.- ರಾಯಲ್ ಚಾಲೆಂಜರ್ಸ್ ಬೆಂಗಳೂರು
ಇದನ್ನೂ ಓದಿ:ಲಖನೌ ಸೂಪರ್ ಜೈಂಟ್ಸ್ನಲ್ಲಿ ಕೆಎಲ್ ರಾಹುಲ್ಗೆ ಸಾಥ್ ನೀಡಲಿದ್ದಾರೆ ಮತ್ತಿಬ್ಬರು ಕನ್ನಡಿಗರು