ಬ್ಯಾಂಕಾಕ್: ಭಾರತ ತಂಡದ ಸ್ಟಾರ್ ಶಟ್ಲರ್ ಪಿ.ವಿ.ಸಿಂಧು ಗುರುವಾರ ವರ್ಲ್ಡ್ ಟೂರ್ ಫೈನಲ್ಸ್ನ ಗುಂಪು ಹಂತದ 2ನೇ ಪಂದ್ಯದಲ್ಲೂ ಸೋಲು ಕಂಡಿದ್ದಾರೆ. ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ರಾಚನೊಕ್ ಇಂಟಾನನ್ ವಿರುದ್ಧ ಸೋಲು ಕಂಡಿದ್ದಾರೆ.
ಗುರುವಾರ ನಡೆದ ಪಂದ್ಯದಲ್ಲಿ ಸಿಂಧು ವಿರುದ್ಧ ಥಾಯ್ ಆಟಗಾರ್ತಿ 21-18, 21-13ರಲ್ಲಿ ಗೆಲುವು ಸಾಧಿಸಿದರು. ಮೊದಲ ಸೆಟ್ನಲ್ಲಿ ಇಬ್ಬರಿಂದಲೂ ಕಠಿಣ ಪೈಪೋಟಿ ಕಂಡುಬಂದಿತು. ಒಂದು ಹಂತದಲ್ಲಿ ಇಬ್ಬರು 18-18ರಲ್ಲಿ ಸಮಬಲ ಸಾಧಿಸಿದ್ದರು. ಆದರೆ ಇಂಟಾನನ್ ಭಾರತೀಯ ಆಟಗಾರ್ತಿಯ ಸವಾಲನ್ನು ಮೆಟ್ಟಿ ನಿಂತು 21-18ರಲ್ಲಿ ಗೇಮ್ ಗೆದ್ದರು.
ಎರಡನೇ ಗೇಮ್ನ ಆರಂಭದಲ್ಲಿ ಇದೇ ರೀತಿಯ ಪೈಪೋಟಿ ಕಂಡುಬಂದಿತು. ಆದರೆ ಮಧ್ಯಂತರದಲ್ಲಿ ಗೇರ್ ಬದಲಿಸಿದ ಇಂಟಾನನ್ ಸಂಪೂರ್ಣ ಪ್ರಾಬಲ್ಯ ಸಾಧಿಸಿ 21-13ರಲ್ಲಿ ಪಂದ್ಯವನ್ನೇ ಗೆದ್ದುಕೊಂಡರು.