ಕರ್ನಾಟಕ

karnataka

ETV Bharat / sports

ಬ್ಯಾಂಕಾಕ್​ನಲ್ಲಿ ಸತತ 2  ಥಾಯ್ಲೆಂಡ್​ ಓಪನ್​ ಗೆದ್ದ ಕರೊಲಿನಾ, ಅಕ್ಸೆಲ್ಸನ್ - ತಾಯ್​ ಜು ಯಿಂಗ್​

ಒಂದು ವಾರದ ಹಿಂದೆಯಷ್ಟೆ 2021ರ ನೂತನ ವರ್ಷದ ಮೊದಲ ಟೂರ್ನಿಯಾದ ಯುನೆಕ್ಸ್​ ಥಾಯ್ಲೆಂಡ್ ಓಪನ್​ನ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿದ್ದ ಕರೊಲಿನಾ ಮರಿನ್ ಮರಿನ್​ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದ ಚೀನಾ ತೈಪೆಯ ತಾಯ್‌ ಜು ಯಿಂಗ್ ವಿರುದ್ಧ 21-19, 21-17ರಲ್ಲಿ ಗೆಲುವು ಸಾಧಿಸಿದರು..

ಥಾಯ್ಲೆಂಡ್ ಓಪನ್ 2021
ಥಾಯ್ಲೆಂಡ್ ಓಪನ್ 2021

By

Published : Jan 24, 2021, 8:26 PM IST

Updated : Jan 24, 2021, 10:59 PM IST

ಬ್ಯಾಂಕಾಕ್ ‌:ಸ್ಪೇನ್​ನ ಶಟ್ಲರ್​ ಕರೊಲಿನಾ ಮರಿನ್ ಮತ್ತು ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್ ಟೊಯೊಟ ಥಾಯ್ಲೆಂಡ್ ಓಪನ್​ನಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ಒಂದು ವಾರದ ಹಿಂದೆಯಷ್ಟೆ 2021ರ ನೂತನ ವರ್ಷದ ಮೊದಲ ಟೂರ್ನಿಯಾದ ಯುನೆಕ್ಸ್​ ಥಾಯ್ಲೆಂಡ್ ಓಪನ್​ನ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿದ್ದ ಕರೊಲಿನಾ ಮರಿನ್ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದ ಚೀನಾ ತೈಪೆಯ ತಾಯ್‌ ಜು ಯಿಂಗ್ ವಿರುದ್ಧ 21-19, 21-17ರಲ್ಲಿ ಗೆಲುವು ಸಾಧಿಸಿದರು.

ಜನವರಿ 17ರಂದು ನಡೆದಿದ್ದ ಯುನೆಕ್ಸ್​ ಥಾಯ್ಲೆಂಡ್​ ಓಪನ್​ ಫೈನಲ್​ನಲ್ಲಿ ಮರಿನ್​ ತಾಯ್‌ ಜು ಯಿಂಗ್ ವಿರುದ್ಧವೇ ಗೆಲುವು ಸಾಧಿಸಿ 2021ರಲ್ಲಿ ಶುಭಾರಂಭ ಮಾಡಿದ್ದರು.

ಥಾಯ್ಲೆಂಡ್​ ಓಪನ್ ಫೈನಲ್​

ಕಳೆದ ವಾರ ಪುರುಷರ ವಿಭಾಗದ ಯುನೆಕ್ಸ್​ ಥಾಯ್ಲೆಂಡ್ ಓಪನ್​ನಲ್ಲಿ ಚಾಂಪಿಯನ್​ ಆಗಿದ್ದ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್ ಡೆನ್ಮಾರ್ಕ್​ನವರೇ ಆದ ಹ್ಯಾನ್ಸ್ ಕ್ರಿಸ್ಟಿಯನ್ ಸಾಲ್ಬರ್ಗ್‌ ವಿಟಿಂಗಸ್‌ ವಿರುದ್ಧ 21-11, 21-7ರಲ್ಲಿ ಜಯ ಗಳಿಸುವ ಮೂಲಕ ಸತತ ಎರಡನೇ ಟೈಟಲ್​ಗೆ ಮುತ್ತಿಕ್ಕಿದರು.

ಮಹಿಳಾ ಡಬಲ್ಸ್‌ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಕಿಮ್ ಸೋ ಯೆಂಗ್‌ ಮತ್ತು ಕಾಂಗ್‌ ಹೀ ಯಂಗ್, ಪುರುಷರ ಡಬಲ್ಸ್‌ನಲ್ಲಿ ಚೀನಾ ತೈಪೆಯ ಲೀ ಯಂಗ್ ಮತ್ತು ವಾಂಗ್‌ ಚಿ ಲಿನ್ ಚಾಂಪಿಯನ್ ಆದರು.

ಇದನ್ನು ಓದಿ:ಕುಮಾರ್​ ಸಂಗಾಕ್ಕರರನ್ನು ಕ್ರಿಕೆಟ್ ನಿರ್ದೇಶಕರಾಗಿ ನೇಮಕ ಮಾಡಿದ ರಾಯಲ್ಸ್​!

Last Updated : Jan 24, 2021, 10:59 PM IST

ABOUT THE AUTHOR

...view details