ಕರ್ನಾಟಕ

karnataka

ETV Bharat / sports

ಸೈನಾ ನೆಹ್ವಾಲ್, ಪ್ರಣಾಯ್ ಥಾಯ್ಲೆಂಡ್ ಓಪನ್‌ನಲ್ಲಿ ಸ್ಪರ್ಧಿಸಲು ಅನುಮತಿ - ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟ

ಸೋಮವಾರ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಪಡೆದಿದ್ದ ನಾಲ್ವರು ಆಟಗಾರರಲ್ಲಿ ಮೂವರನ್ನು ಯುನೆಕ್ಸ್​ ಥಾಯ್ಲೆಂಡ್​ ಓಪನ್​ನಲ್ಲಿ ಭಾಗವಹಿಸಲು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯುಎಫ್) ಮತ್ತು ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಥೈಲ್ಯಾಂಡ್ ಅನುಮತಿ ನೀಡಿದೆ.

ಸೈನಾ ನೆಹ್ವಾಲ್ /ಪ್ರಣಯ್
ಸೈನಾ ನೆಹ್ವಾಲ್ /ಪ್ರಣಯ್

By

Published : Jan 12, 2021, 8:44 PM IST

ಬ್ಯಾಂಕಾಕ್​: ಸೋಮವಾರ ನಡೆಸಿದ ಕೋವಿಡ್ ಟೆಸ್ಟ್​ನಲ್ಲಿ ಪಾಸಿಟಿವ್​ ವರದಿ ಪಡೆದಿದ್ದ ಭಾರತದ ಸ್ಟಾರ್​ ಶಟ್ಲರ್​ಗಳಾದ ಸೈನಾ ನೆಹ್ವಾಲ್ ಮತ್ತು ಪ್ರಣಯ್ ಹೆಚ್​.ಎಸ್ ಮಂಗಳವಾರ ಕೋವಿಡ್​ ಟೆಸ್ಟ್​ನಲ್ಲಿ ನೆಗೆಟಿವ್ ಪಡೆದಿದ್ದು, ಅವರು ಥಾಯ್ಲೆಂಡ್​ ಓಪನ್​ನಲ್ಲಿ ಆಡಬಹುದು ಎಂದು ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟ(BWF) ಹಾಗೂ ಬ್ಯಾಡ್ಮಿಂಟನ್​ ಅಸೋಸಿಯೇಶನ್ ಆಫ್​ ಥಾಯ್ಲೆಂಡ್​(BAT) ಖಚಿತಪಡಿಸಿದೆ.

ಭಾರತದ ಸೈನಾ ನೆಹ್ವಾಲ್ ಮತ್ತು ಪ್ರಣಯ್​ ಹಾಗೂ ಜರ್ಮನಿಯ ಜೋನ್ಸ್​ ರಾಲ್ಫಿ ಏಷ್ಯನ್​ ಲೆಗ್​ನಲ್ಲಿ ಆಡಬಹುದು ಬಿಡಬ್ಲ್ಯೂಎಫ್​ ದೃಢಪಡಿಸಿದೆ.

ಸೈನಾ ನೆಹ್ವಾಲ್

ಸೈನಾ, ಪ್ರಣಯ್​ ಮತ್ತು ಜಾನ್ಸೆನ್​ ಪಿಸಿಆರ್​ ಟೆಸ್ಟ್​ನಲ್ಲಿ ಪಾಸಿಟಿವ್ ಪಡೆದಿದ್ದರು. ಈ ಮೂವರು 2020ರಲ್ಲಿ ಕೊನೆಯಲ್ಲಿ ಕೋವಿಡ್​ ಸೋಂಕಿಗೆ ಒಳಗಾಗಿದ್ದರು ಎಂದು ಬಿಡಬ್ಲ್ಯೂಎಫ್​ ತಿಳಿಸಿದೆ.

ಸೈನಾ ನೆಹ್ವಾಲ್ ಮತ್ತು ಪಾರುಪಳ್ಳಿ ಕಶ್ಯಪ್​ ಅವರ ಪಂದ್ಯವನ್ನು ವಾಕ್​ಓವರ್​ ಕೊಡಲಾಗಿತ್ತು. ಆದರೆ ಇದೀಗ ಅವರು ಸೋಂಕಿತರಲ್ಲ ಎಂದು ಸಾಬೀತಾಗಿರವುದರಿಂದ ಅವರ ಪಂದ್ಯಗಳನ್ನು ಬುಧವಾರ ಮರು ನಿಗದಿಪಡಿಸಲಾಗುವುದು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕೋವಿಡ್ ಟೆಸ್ಟ್​ ವೇಳೆ ಮೂಗಿನಲ್ಲಿ ರಕ್ತ.. ಈ ರೀತಿ ಚಿಕಿತ್ಸೆ ಸ್ವೀಕಾರಾರ್ಹವಲ್ಲ ಎಂದು ಕಿಡಿಂಬಿ ಶ್ರೀಕಾಂತ್ ಕಿಡಿ

For All Latest Updates

ABOUT THE AUTHOR

...view details