ಕರ್ನಾಟಕ

karnataka

ETV Bharat / sports

ಆಸೀಸ್‌ ನನಗೆ ಮನೆಯ ರೀತಿ ಭಾಸವಾಗುತ್ತಿದೆ : ಗ್ರೀಕ್ ಟೆನಿಸ್ ತಾರೆ ಸ್ಟೆಫಾನೊಸ್ ಸಿಟ್ಸಿಪಾಸ್ - ಗ್ರೀಕ್ ಆಟಗಾರ ಸ್ಟೆಫಾನೊಸ್ ಸಿಟ್ಸಿಪಾಸ್​ ಸುದ್ದಿ

ಆಟಗಾರರಿಗೆ ಮಾತ್ರವಲ್ಲ, ಈ ಪಂದ್ಯಾವಳಿಯ ಭಾಗವಾಗಲು ಮತ್ತು ಆಟಗಾರರನ್ನು ಪ್ರತಿನಿಧಿಸಲು ಬಂದ ಎಲ್ಲಾ ಏಜೆಂಟರು, ತರಬೇತುದಾರರು ಮತ್ತು ಸಿಬ್ಬಂದಿಗೆ ನನ್ನ ಧನ್ಯವಾದ. ಆಸ್ಟ್ರೇಲಿಯಾ ನನಗೆ ಮನೆಯಂತೆ ಭಾಸವಾಗುತ್ತಿದೆ..

Beaten Stefanos Tsitsipas reflects on Australian Open
ಸ್ಟೆಫಾನೊಸ್ ಸಿಟ್ಸಿಪಾಸ್ ಹೇಳಿಕೆ

By

Published : Feb 20, 2021, 2:38 PM IST

ಮೆಲ್ಬೋರ್ನ್​ :ವರ್ಷದ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಸರಣಿಯಲ್ಲಿಯೇ ಡೇನಿಲ್ ಮೆಡ್ವೆಡೆವ್ ವಿರುದ್ಧ ಸೋಲನ್ನುಂಡ ಗ್ರೀಕ್ ಆಟಗಾರ ಸ್ಟೆಫಾನೊಸ್ ಸಿಟ್ಸಿಪಾಸ್ ಆಸ್ಟ್ರೇಲಿಯಾ ಬಗ್ಗೆ ಕೆಲ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಸ್ಟೆಫಾನೊಸ್ ಸಿಟ್ಸಿಪಾಸ್ ಮಾತನಾಡಿರುವುದು..

ಹೃದಯಸ್ಪರ್ಶಿ ಸ್ವಾಗತ ಕೋರಿದ ಆಸ್ಟ್ರೇಲಿಯಾಗೆ ತಮ್ಮ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಕೋವಿಡ್​ ಹಿನ್ನೆಲೆ 14 ದಿನಗಳ ಕಾಲ ರೂಮ್​ನಲ್ಲೇ ಉಳಿದರೂ ನಂತರದಲ್ಲಿ ನಾನು ಇಲ್ಲಿ ಸಾಕಷ್ಟು ಅದ್ಭುತ ಕ್ಷಣಗಳನ್ನು ನನ್ನ ನೆನಪಿನ ಬುತ್ತಿಗೆ ತುಂಬಿಸಿಕೊಂಡಿದ್ದೇನೆ ಎಂದು ಸಿಟ್ಸಿಪಾಸ್ ಹೇಳಿದ್ದಾರೆ.

ಆಟಗಾರರಿಗೆ ಮಾತ್ರವಲ್ಲ, ಈ ಪಂದ್ಯಾವಳಿಯ ಭಾಗವಾಗಲು ಮತ್ತು ಆಟಗಾರರನ್ನು ಪ್ರತಿನಿಧಿಸಲು ಬಂದ ಎಲ್ಲಾ ಏಜೆಂಟರು, ತರಬೇತುದಾರರು ಮತ್ತು ಸಿಬ್ಬಂದಿಗೆ ನನ್ನ ಧನ್ಯವಾದ. ಆಸ್ಟ್ರೇಲಿಯಾ ನನಗೆ ಮನೆಯಂತೆ ಭಾಸವಾಗುತ್ತಿದೆ.

ನಾನು ಇಲ್ಲಿ ಆಡುವ ವೇಳೆ ಎಲ್ಲರ ಆಶೀರ್ವಾದ ಸಿಕ್ಕಿದೆ. ಟೆನಿಸ್ ಆಡಲು ಇದು ನಿಜವಾಗಿಯೂ ಒಳ್ಳೆಯ ಸ್ಥಳವಾಗಿದೆ ”ಎಂದು ಗ್ರೀಕ್ ಟೆನಿಸ್ ತಾರೆ ಹೇಳಿದರು.

ಶುಕ್ರವಾರ ಮೆಲ್ಬೋರ್ನ್ ಪಾರ್ಕ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಸಿಟ್ಸಿಪಾಸ್ ವಿಶ್ವದ 4ನೇ ಶ್ರೇಯಾಂಕದ ಆಟಗಾರ ರಷ್ಯಾದ ಮೆಡ್ವೆಡೆವ್ ವಿರುದ್ಧ 6-4, 6-2, 7-5 ಸೆಟ್‌ಗಳಿಂದ ಸೋತರು.

ABOUT THE AUTHOR

...view details