ಚೆನ್ನೈ: ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿರುವ ಕ್ರೀಡಾ ಪಟುಗಳು ಸಿನಿ ತಾರೆಯರನ್ನು ವಿವಾಹವಾಗುವುದು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಆ ಸಾಲಿಗೆ ಬ್ಯಾಡ್ಮಿಂಟನ್ ಮಾಜಿ ಆಟಗಾರ್ತಿ ಜ್ಲಾಲಾ ಗುಟ್ಟಾ ಕೂಡ ಸೇರಿಕೊಂಡಿದ್ದಾರೆ.
ಹೊಸ ವರ್ಷದ ಮೊದಲ ದಿನವೇ ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸರ್ಬಿಯಾ ಮೂಲದ ಮಾಡೆಲ್, ನಟಿ ನತಾಶಾ ಸ್ಟ್ಯಾಂಕೊವಿಕ್ರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗಾಗಲೆ ಕೊಹ್ಲಿ, ಹರ್ಭಜನ್ ಸಿಂಗ್, ಜಹೀರ್ ಖಾನ್ ಕೂಡ ಸಿನಿಮಾ ನಟಿಯರನ್ನು ಮದುವೆಯಾಗಿದ್ದಾರೆ.
ಆದರೆ, ಈ ಬಾರಿ ಚರ್ಚೆಯಲ್ಲಿರೋದು ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಎನ್ನುವುದೇ ಆಶ್ಚರ್ಯಕರ ವಿಷಯ. ಜ್ವಾಲಾ" ಮೈ ಬೇಬಿ.. ಹ್ಯಾಪಿ ನ್ಯೂ ಇಯರ್" ಎಂದು ವಿಷ್ಣು ವಿಶಾಲ್ ಚುಂಬಿಸುತ್ತಿರುವ ಫೋಟೋವನ್ನು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ತಮ್ಮಿಬ್ಬರ ನಡುವಿನ ಪ್ರೇಮವನ್ನು ಹೇಳಿಕೊಂಡಿದ್ದಾರೆ.
36 ವರ್ಷದ ಜ್ವಾಲಾಗುಟ್ಟಾ ಭಾರತದ ಪರ ಒಟ್ಟು 316 ಪಂದ್ಯಗಳನ್ನು ಗೆದ್ದಿರುವ ದಾಖಲೆ ಹೊಂದಿದ್ದಾರೆ. ಇನ್ನು ವಿಷ್ಣು ತಮಿಳಿನಲ್ಲಿ ರಾಟ್ಸಸನ್ ಸಿಲುಕುವ್ ಸಿಂಗಂ ಸೇರದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.