ಹೋ ಚಿ ಮಿನ್ಹ್(ವಿಯೆಟ್ನಾಂ) : ಭಾರತದ ಸೌರಭ್ ವರ್ಮಾ ವಿಯೆಟ್ನಾಂ ಬ್ಯಾಡ್ಮಿಂಟನ್ ಓಪನ್ನ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್ನ ಮಿನೊರು ಕೊಗ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ.
ಇಂದು ನಡೆದ ವಿಯೆಟ್ನಾಂ ಓಪನ್ ಬಿಡಬ್ಲ್ಯೂಎಫ್ ಟೂರ್ ಸೂಪರ್ 100 ಟೂರ್ನಮೆಂಟ್ನ ಸೆಮಿಫೈನಲ್ ಪಂದ್ಯದಲ್ಲಿ ಸೌರಭ್ ಜಪಾನ್ನ ಮಿನೊರು ಕೊಗ ಅವರನ್ನು 22-20, 21-15 ರ ನೇರಸೆಟ್ಗಳಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ.