ಬ್ಯಾಂಕಾಂಕ್: ವಿಶ್ವ ಚಾಂಪಿಯನ್ ಪಿವಿ ಸಿಂಧು ಟೊಯೋಟಾ ಥಾಯ್ಲೆಂಡ್ ಓಪನ್ ಸೂಪರ್ 100 ಟೂರ್ನಮೆಂಟ್ನಲ್ಲಿ ಮಲೇಷ್ಯಾದ ಕಿಸೋನ್ ಸೆಲ್ವದುರೈ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ 21-10, 21-12 ಗೇಮ್ಗಳ ಅಂತರದಿಂದ ಕೇವಲ 35 ನಿಮಿಷಗಳಲ್ಲಿ ಕಿಸೋನ್ರನ್ನು ಮಣಿಸಿದರು. ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್ನ ರಚನಾಕ್ ಇಂಟನಾನ್ ಅವರನ್ನು ಎದುರಿಸಲಿದ್ದಾರೆ. ರಚನಾಕ್ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಸೈನಾ ವಿರುದ್ಧ ಜಯ ಸಾಧಿಸಿದ್ದರು.