ಕರ್ನಾಟಕ

karnataka

ETV Bharat / sports

ಥಾಯ್ಲೆಂಡ್ ಓಪನ್​: 2ನೇ ಸುತ್ತಿನಲ್ಲಿ ಸೋತು ಹೊರಬಿದ್ದ ಸೈನಾ ನೆಹ್ವಾಲ್ - Saina Nehwal bows out in 2nd Round Busanan

ಸೈನಾ ಇಂದಿನ ಪಂದ್ಯದಲ್ಲಿ ಥಾಯ್ಲೆಂಡ್​ನ ಬುಸನನ್​ ವಿರುದ್ಧ 23-21, 14-21, 16-21ರಲ್ಲಿ ಸೋಲು ಕಂಡರು.

ಸೈನಾ ನೆಹ್ವಾಲ್​
ಸೈನಾ ನೆಹ್ವಾಲ್​

By

Published : Jan 14, 2021, 6:31 PM IST

ಬ್ಯಾಂಕಾಕ್​: ವಿಶ್ವದ ಮಾಜಿ ನಂಬರ್ ಒನ್ ಶಟ್ಲರ್​ ಸೈನಾ ನೆಹ್ವಾಲ್​ ಇಂದು ನಡೆದ ಥಾಯ್ಲೆಂಡ್​ ಓಪನ್​ನ ಮಹಿಳೆಯರ 2ನೇ ಸುತ್ತಿನ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದು, ಸಿಂಗಲ್ಸ್ ವಿಭಾಗದಲ್ಲಿ ಭಾರತದ ಹೋರಾಟ ಅಂತ್ಯವಾಗಿದೆ.

ಸೈನಾ ಇಂದಿನ ಪಂದ್ಯದಲ್ಲಿ ಥಾಯ್ಲೆಂಡ್​ನ ಬುಸಾನನ್​ ವಿರುದ್ಧ 23-21, 14-21, 16-21ರಲ್ಲಿ ಸೋಲು ಕಂಡರು. ಮೊದಲ ಗೇಮ್​ನಲ್ಲಿ ಕಠಿಣ ಪೈಪೋಟಿ ನೀಡಿದ್ದ 2ನೇ ಗೇಮ್​ನಲ್ಲಿ ಮತ್ತೆ ಕಮ್​ಬ್ಯಾಕ್​ ಮಾಡಿ ಪಂದ್ಯವನ್ನು ಮೂರನೇ ಗೇಮ್​ಗೆ ಕೊಂಡೊಯ್ದರು. ಆದರೆ ನಿರ್ಣಾಯಕ ಗೇಮ್​ನಲ್ಲಿ ಥಾಯ್​ ಆಟಗಾರ್ತಿ ವಿರುದ್ಧ ರೋಚಕ ಸೋಲು ಕಂಡರು.

ಸೈನಾ ಮೊದಲ ಸುತ್ತಿನ ಪಂದ್ಯದಲ್ಲಿ ಮಲೇಷ್ಯಾದ ಕಿಸೋನ್​ ಸೆಲ್ವದುರೇ ವಿರುದ್ಧ ಸುಲಭ ಜಯ ಸಾಧಿಸಿ 2ನೇ ಸುತ್ತಿಗೆ ಪ್ರವೇಶಿಸಿದ್ದರು. ಸೈನಾ ಸೋಲಿನ ಮೂಲಕ ಟೂರ್ನಿಯಲ್ಲಿ ಭಾರತದ ಸಿಂಗಲ್ಸ್​ ವಿಭಾಗದ ಸವಾಲು ಅಂತ್ಯವಾಗಿದೆ.

ಇದಕ್ಕೂ ನಡೆದ ಪಂದ್ಯಗಳಲ್ಲಿ ಕಿಡಂಬಿ ಶ್ರೀಕಾಂತ್ ವಾಕ್​ ಓವರ್​ ನೀಡಿದರೆ, ಸಾತ್ವಿಕ್- ಚಿರಾಗ್​ ಜೋಡಿ ಇಂಡೋನೇಷ್ಯಾದ ಅಸನ್​/ಸೆತಿಯಾವಾನ್​ ಜೋಡಿ ವಿರುದ್ಧ ಸೋಲು ಕಂಡಿತ್ತು. ಇದೀಗ ಸಾತ್ವಿಕ್ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಮಾತ್ರ ಭಾರತದ ಪರ ಕಣದಲ್ಲಿ ಉಳಿದುಕೊಂಡಿದ್ದಾರೆ.

ಇದನ್ನು ಓದಿ:ಥಾಯ್ಲೆಂಡ್​ ಓಪನ್​ ಟೂರ್ನಿಯಿಂದ ಹೊರ ಬಿದ್ದ ಕಿಡಂಬಿ ಶ್ರೀಕಾಂತ್​

ABOUT THE AUTHOR

...view details