ಬ್ಯಾಂಕಾಕ್: ಭಾರತದ ಅನುಭವಿ ಶಟ್ಲರ್ ಪರುಪಳ್ಳಿ ಕಶ್ಯಪ್ ಥಾಯ್ಲೆಂಡ್ ಓಪನ್ನ ಮೊದಲ ಸುತ್ತಿನ ಪಂದ್ಯದ ಮೂರನೇ ಗೇಮ್ ನಡೆಯುವಾಗ ಪಂದ್ಯದಿಂದ ಹೊರಬಂದಿದ್ದಾರೆ.
ಕೆನಡಾದ ಆಂಥೋನಿ ಹೋ ಶೂ ವಿರುದ್ಧದ ಪಂದ್ಯದಲ್ಲಿ ಕಶ್ಯಪ್ ಮೊದಲ ಗೇಮ್ನಲ್ಲಿ 21-9ರಿಂದ ಸೋಲು ಕಂಡಿದ್ದರು. ನಂತರ ಎರಡನೇ ಗೇಮ್ನಲ್ಲಿ ಕಮ್ಬ್ಯಾಕ್ ಮಾಡಿ 21-13ರಲ್ಲಿ ಗೆದ್ದರು. ಆದರೆ ಮೂರನೇ ಗೇಮ್ನಲ್ಲಿ ಹೋ ಶೂ 21-8ರಲ್ಲಿ ಮುನ್ನಡ ಸಾಧಿಸಿದ್ದ ವೇಳೆ ಭಾರತೀಯ ಶಟ್ಲರ್ ಹೊರನಡೆಯಲು ನಿರ್ಧರಿಸಿದರು. ಪರಿಣಾಮ ಕೆನಡಾ ಆಟಗಾರ ಪೂರ್ಣ ಪಂದ್ಯವನ್ನಾಡದೇ 2ನೇ ಸುತ್ತಿಗೆ ತೇರ್ಗಡೆ ಹೊಂದಿದರು.
ಇದಕ್ಕು ಮೊದಲು ಮಿಕ್ಸಡ್ ಡಬಲ್ಸ್ನಲ್ಲಿ ಸುಮೀತ್ ರೆಡ್ಡಿ ಮತ್ತು ಸಿಕ್ಕಿ ರೆಡ್ಡಿ 22-20 21-17ರಲ್ಲಿ ಹಾಂಕಾಂಗ್ ಜೋಡಿಯಾದ ತಂಗ್ ಚುನ್ ಮನ್ ಮತ್ತಯು ತ್ಸೆ ಯಿಂಗ್ ಸುಯೆತ್ ವಿರುದ್ಧ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಸೋಲು ಕಂಡರು.