ಬ್ಯಾಕಾಂಕ್ :ಥೈಲ್ಯಾಂಡ್ ಓಪನ್ ಸೂಪರ್-1000 ಟೂರ್ನಿಯಲ್ಲಿಕ್ರೀಡಾಪಟುಗಳಿಗೆ ಸುಗಮವಾಗಿ ಕೊರೊನಾ ಪರೀಕ್ಷೆ ನಡೆಸಲು ಒತ್ತು ನೀಡಿದ್ದೇವೆ. ಮತ್ತು ಅದಕ್ಕಾಗಿ ಸಂಘಟಕರೊಂದಿಗೆ ಕಾರ್ಯ ಪ್ರವೃತ್ತರಾಗಿದ್ದೇವೆ ಎಂದು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯೂಎಫ್) ಬುಧವಾರ ಹೇಳಿದೆ.
ಇದನ್ನೂ ಓದಿ...ಪುಕೋವ್ಸ್ಕಿ ಫಿಟ್ ಆಗದಿದ್ದರೆ ಮತ್ತೊಬ್ಬ ಓಪನರ್ ಸಿದ್ಧವಾಗಿದ್ದಾರೆ: ಜಸ್ಟಿನ್ ಲ್ಯಾಂಗರ್
ಭಾರತದ ಷಟ್ಲರ್ ಕಿಡಂಬಿ ಶ್ರೀಕಾಂತ್ ಕೋವಿಡ್ ಪರೀಕ್ಷೆಯ ನಂತರ ಮೂಗಿನಲ್ಲಿ ರಕ್ತ ಬಂದಿತ್ತು. ಆರೋಗ್ಯ ಅಧಿಕಾರಿಗಳ ಕಳಪೆ ಚಿಕಿತ್ಸೆ ಎಂದು ಆಕ್ಷೇಪ ವ್ಯಕ್ತವಾಗಿತ್ತು. ಕಿಡಂಬಿ ಅವರಿಂದ ಮೂರು ಬಾರಿ ಮೂಗು ಮತ್ತು ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿದೆ. ಹೀಗಾದರೆ, ಕ್ರೀಡಾಪಟುಗಳಿಗೆ ಕಿರಿಕಿರಿ ಮತ್ತು ದುರ್ಬಲತೆ ಉಂಟು ಮಾಡಲಿದೆ ಎಂದು ಬಿಡಬ್ಲ್ಯೂಎಫ್ ತಿಳಿಸಿದೆ.
ಮಂಗಳವಾರ ಸ್ವ್ಯಾಬ್ ಸಂಗ್ರಹಿಸುವ ಕಡ್ಡಿ ಕಿಡಿಂಬಿ ಅವರ ಮೂಗಿನಲ್ಲಿ ಬೇರೆಡೆ ಮರಳಿತು. ಇದರಿಂದಾಗಿ ರಕ್ತಸ್ರಾವ ಉಂಟಾಯಿತು. ಕೋವಿಡ್-19 ಪರೀಕ್ಷೆ ನಡೆಸುವ ಸಿಬ್ಬಂದಿ ಕ್ರೀಡಾಪಟುವಿನ ಮೂಗಿನಿಂದ ಬಂದ ರಕ್ತಸ್ರಾವ ಗಮನಿಸಲಿಲ್ಲ. ಕಿಡಂಬಿಯಿಂದ ಯಾವುದೇ ದೂರು ಬಂದಿಲ್ಲ ಎಂದು ಕ್ರೀಡೆಯ ವಿಶ್ವ ಆಡಳಿತ ಮಂಡಳಿ ಹೇಳಿದೆ.
ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ನಿನ್ನೆ ವರದಿ ಬಂದಿತ್ತು. ಸದ್ಯ ಅವರ ವರದಿ ತಪ್ಪಾಗಿದೆ ಎಂದು ತಿಳಿದು ಬಂದಿದೆ. ಆದರೆ, ಸೈನಾ ಆಡುತ್ತಾರೋ ಇಲ್ಲವೋ ಎಂಬುದು ಖಚಿತವಾಗಿಲ್ಲ. ಈ ಕುರಿತು ಇಂದು ಸ್ಪಷ್ಟತೆ ಸಿಗಲಿದೆ. ಪಂದ್ಯಾವಳಿ ಜ.12ರಿಂದ ಆರಂಭವಾಗಿದ್ದು, 17ಕ್ಕೆ ಮುಗಿಯಲಿದೆ.