ಕರ್ನಾಟಕ

karnataka

ETV Bharat / sports

ಸಯ್ಯದ್​ ಮೋದಿ ಇಂಟರ್​ನ್ಯಾಷನಲ್ ಬ್ಯಾಡ್ಮಿಂಟನ್‌​: ಫೈನಲ್​ನಲ್ಲಿ ಮುಗ್ಗರಿಸಿದ ಸೌರಭ್​ ವರ್ಮಾ

ದಕ್ಷಿಣ ಕೊರಿಯಾದ ಹಿಯೊ ಕ್ವಾಂಗ್​ ಹೀ ಅವರನ್ನು ಮಣಿಸಿ ಫೈನಲ್​ ಪ್ರವೇಶಿಸಿದ್ದ ಸೌರಭ್​ ವರ್ಮಾ, ಚೈನೀಸ್​ ತೈಪೆಯ ವಾಂಗ್​ ಜು ವೈ ವಿರುದ್ಧ ಸೋಲನುಭವಿಸಿ ರನ್ನರ್​ ಅಪ್​ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡರು.

Syed Modi International
Syed Modi International

By

Published : Dec 1, 2019, 6:41 PM IST

ಲಕ್ನೋ(ಉತ್ತರ ಪ್ರದೇಶ): ಸಯ್ಯದ್​ ಮೋದಿ ಇಂಟರ್​ನ್ಯಾಷನಲ್​ ಬ್ಯಾಡ್ಮಿಂಟನ್‌ ಪುರುಷರ ಸಿಂಗಲ್ಸ್​ನಲ್ಲಿ ಫೈನಲ್​ ಪ್ರವೇಶಿಸಿದ್ದ ಭಾರತದ ಉದಯೋನ್ಮುಖ ಆಟಗಾರ ಸೌರಭ್​ ವರ್ಮಾ ಚೈನಾ ತೈಪೆಯ(ತೈವಾನ್​) ವಾಂಗ್​ ಜು ವೈ ವಿರುದ್ಧ ಪರಾಜಯಗೊಂಡರು.

ಸೌರಭ್​ ವರ್ಮಾ ಸೆಮಿಫೈನಲ್​ನಲ್ಲಿ ದಕ್ಷಿಣ ಕೊರಿಯಾದ ಹಿಯೊ ಕ್ವಾಂಗ್​ ಹೀ ಅವರನ್ನು 21-17, 16-21, 21-18ರಲ್ಲಿ ಮಣಿಸಿ ಫೈನಲ್​ ಪ್ರವೇಶಿಸಿದ್ದರು. ಆದರೆ ಫೈನಲ್​ನಲ್ಲಿ ಚೈನೀಸ್​ ತೈಪೆಯ ವಾಂಗ್​ ಜು ವೈ ವಿರುದ್ಧ ಆಘಾತ ಅನುಭವಿಸಿದ್ದಾರೆ.

ಫೈನಲ್​ ಪಂದ್ಯದಲ್ಲಿ ವಾಂಗ್ ಜು 21-15, 21-17 ರಲ್ಲಿ ಭಾರತೀಯ ಆಟಗಾರನ ವಿರುದ್ಧ ಸುಲಭ ಜಯ ಸಾಧಿಸಿದರು. ಸೌರಭ್​ ವರ್ಮಾ ಕೇವಲ 48 ನಿಮಿಷಗಳಲ್ಲಿ ವಾಂಗ್​ ಜುಗೆ ಶರಣಾಗಿದ್ದಾರೆ. ಆ ಮೂಲಕ ಸತತ 4 ವರ್ಷಗಳ ಕಾಲ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದ ಭಾರತ ಈ ಬಾರಿ ಕಿರೀಟ ಉಳಿಸಿಕೊಳ್ಳುವಲ್ಲಿ ವಿಫಲವಾಯಿತು.

ಮಹಿಳೆಯರ ಸಿಂಗಲ್ಸ್​ನಲ್ಲಿ ಮಾಜಿ ನಂಬರ್​ ಒನ್​ ಆಟಗಾರ್ತಿ ಕರೋಲಿನಾ ಮರಿನ್ ಅವರು ಇಂದು ಪಿಟ್ಟಾಯಪೋರ್ನ್‌ ಚೈವಾನ್‌ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ.

ಪ್ರತೀ ವರ್ಷ ಯಾವುದಾದರೊಂದು ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುತ್ತಿದ್ದ ಭಾರತೀಯ ಪಟುಗಳು ಈ ಬಾರಿ ಎಲ್ಲಾ ವಿಭಾಗಗಳಲ್ಲೂ ಸೋಲು ಕಾಣುವ ಮೂಲಕ 8 ವರ್ಷಗಳ ಬಳಿಕ ಪ್ರಶಸ್ತಿರಹಿತವಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ABOUT THE AUTHOR

...view details