ಕರ್ನಾಟಕ

karnataka

ETV Bharat / sports

ಬ್ಯಾಡ್ಮಿಂಟನ್: ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಸ್ಪೇನ್‌ನ ಕರೋಲಿನಾ ಮರಿನ್​ - ಸ್ಪೇನಿನ ಕರೋಲಿನ ಮರಿನ್ ಚಾಂಪಿಯನ್​

ಲಕ್ನೊದಲ್ಲಿ ನಡೆದ ಪಂದ್ಯದಲ್ಲಿ ಮರಿನ್,​ ಥಾಯ್ಲೆಂಡ್​ನ ಪಿಟ್ಟಾಯಪೋರ್ನ್‌ ಚೈವಾನ್‌ನ ವಿರುದ್ಧ 21-12, 21-16 ರ ಪಾಯಿಂಟುಗಳ ಅಂತರದಿಂದ ಮಣಿಸಿ ಟ್ರೋಫಿ ಎತ್ತಿಹಿಡಿದರು.

Carolina Marin win gold
Carolina Marin win gold

By

Published : Dec 1, 2019, 7:18 PM IST

ಲಕ್ನೋ:ಸ್ಪೇನ್‌ ಆಟಗಾರ್ತಿ ಕರೋಲಿನಾ ಮರಿನ್​, ಸಯ್ಯದ್​ ಮೋದಿ ಇಂಟರ್​ನ್ಯಾಷನಲ್ ಬ್ಯಾಡ್ಮಿಂಟನ್‌​ ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿದ್ದಾರೆ.

ಲಕ್ನೊದಲ್ಲಿ ನಡೆದ ಪಂದ್ಯದಲ್ಲಿ ಮರಿನ್,​ ಥಾಯ್ಲೆಂಡ್​ನ ಪಿಟ್ಟಾಯಪೋರ್ನ್‌ ಚೈವಾನ್‌ನ ವಿರುದ್ಧ 21-12, 21-16 ರಲ್ಲಿ ಮಣಿಸಿ ಟ್ರೋಫಿ ಎತ್ತಿಹಿಡಿದರು.

ಒಲಿಂಪಿಕ್​ ಚಾಂಪಿಯನ್​ ಮರಿನ್​ ಎರಡೂ ಸೆಟ್​ಗಳಲ್ಲೂ ಥಾಯ್​ ಆಟಗಾರ್ತಿಯನ್ನು ಸುಲಭವಾಗಿ ಮಣಿಸುವ ಮೂಲಕ ಗಾಯದಿಂದ ಹೊರಬಂದು ಬ್ಯಾಡ್ಮಿಂಟನ್ ಜಗತ್ತಿಗೆ ಭರ್ಜರಿಯಾಗಿ ಕಮ್​ಬ್ಯಾಕ್​ ಮಾಡಿದ್ದಾರೆ.

ಇದಕ್ಕೂ ಮೊದಲು ನಡೆದ ಪುರುಷರ ಸಿಂಗಲ್ಸ್​ ಫೈನಲ್​​ ಪಂದ್ಯದಲ್ಲಿ ಭಾರತದ ಸೌರಭ್​ ವರ್ಮಾರನ್ನು ಮಣಿಸಿ ಚೈನೀಸ್​ ತೈಪೆಯ ವಾಂಗ್​ ಜು ವೈ ಚಾಂಪಿಯನ್​ ಆಗಿ ಹೊರಹೊಮ್ಮಿದ್ದರು.

ABOUT THE AUTHOR

...view details