ಕರ್ನಾಟಕ

karnataka

ETV Bharat / sports

World Championships: ಚೀನಾ ಶಟ್ಲರ್​ ಮಣಿಸಿ ಕ್ವಾರ್ಟರ್​ ಫೈನಲ್​ಗೆ ಎಂಟ್ರಿಕೊಟ್ಟ ಕಿಡಂಬಿ ಶ್ರೀಕಾಂತ್​

ಗುರುವಾರ ನಡೆದ ಪ್ರಿ ಕ್ವಾರ್ಟರ್​ ಫೈನಲ್ಸ್​ನಲ್ಲಿ ಶ್ರೀಕಾಂತ್​ 21-10, 21-15ರ ನೇರ ಗೇಮ್​ಗಳ ಅಂತರದಲ್ಲಿ ಜುವಾಂಗ್​ ವಿರುದ್ಧ ಸುಲಭ ಜಯ ಸಾಧಿಸಿದರು.12ನೇ ಶ್ರೇಯಾಂಕದ ಶ್ರೀಕಾಂತ್ ಮುಂದಿನ ಸುತ್ತಿನಲ್ಲಿ ನೆದರ್ಲೆಂಡ್ಸ್​ನ ಮಾರ್ಕ್​ ಕಾಲ್ಜೋವ್​ ವಿರುದ್ಧ ಸೆಣಸಾಡಲಿದ್ದಾರೆ.

World Championships
ಕ್ವಾರ್ಟರ್​ ಫೈನಲ್​ಗೆ ಎಂಟ್ರಿಕೊಟ್ಟ ಕಿಡಂಬಿ ಶ್ರೀಕಾಂತ್​

By

Published : Dec 16, 2021, 8:51 PM IST

Updated : Dec 18, 2021, 2:59 PM IST

ವೆಲ್ವಾ(ಸ್ಪೇನ್): ಭಾರತದ ಸ್ಟಾರ್ ಶಟ್ಲರ್​ ಕಿಡಂಬಿ ಶ್ರೀಕಾಂತ್ ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ 27ನೇ ಶ್ರೇಯಾಂಕದಲ್ಲಿರುವ ಚೀನಾದ ಲು ಗವಾಂಗ್​ ಜು ವಿರುದ್ಧ ಸುಲಭ ಜಯ ಸಾಧಿಸಿ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಪ್ರಿ ಕ್ವಾರ್ಟರ್​ ಫೈನಲ್ಸ್​ನಲ್ಲಿ ಶ್ರೀಕಾಂತ್​ 21-10, 21-15ರ ನೇರ ಗೇಮ್​ಗಳ ಅಂತರದಲ್ಲಿ ಜುವಾಂಗ್​ ವಿರುದ್ಧ ಸುಲಭ ಜಯ ಸಾಧಿಸಿದರು.12ನೇ ಶ್ರೇಯಾಂಕದ ಶ್ರೀಕಾಂತ್ ಮುಂದಿನ ಸುತ್ತಿನಲ್ಲಿ ನೆದರ್ಲೆಂಡ್ಸ್​ನ ಮಾರ್ಕ್​ ಕಾಲ್ಜೋವ್​ ವಿರುದ್ಧ ಸೆಣಸಾಡಲಿದ್ದಾರೆ.

ಇದಕ್ಕೂ ಮುನ್ನ ನಡೆದ ಮಹಿಳೆಯರ್ ಸಿಂಗಲ್ಸ್​ನ 3ನೇ ಸುತ್ತಿನಲ್ಲಿ ಹಾಲಿ ವಿಶ್ವ ಚಾಂಪಿಯನ್​ ಪಿವಿ ಸಿಂಧು​ 21-14, 21-18ರಲ್ಲಿ ಥಾಯ್​ ಶಟ್ಲರ್ ಚೊಚುವಾಂಗ್​​ ವಿರುದ್ಧ ಫ್ರೀ ಕ್ವಾರ್ಟರ್​ ಫೈನಲ್​ನಲ್ಲಿ ಸುಲಭ ಜಯ ಸಾಧಿಸಿದರು. ಈ ಮೂಲಕ ಚೊಚುವಾಂಗ್​ ವಿರುದ್ಧ ಮುಖಾಮುಖಿಯಲ್ಲಿ 5-3ರಲ್ಲಿ ಮುನ್ನಡೆ ಹೆಚ್ಚಿಸಿಕೊಂಡರು. ಅಲ್ಲದೇ ಈ ಋತುವಿನಲ್ಲಿ ಥಾಯ್​ ಆಟಗಾರ್ತಿ ವಿರುದ್ಧ ಕಂಡಿದ್ದ ಸೋಲಿಗೆ ಸೇಡು ತೀರಿಸಿಕೊಂಡರು.

ಇನ್ನು ಎರಡು ಒಲಿಂಪಿಕ್ ಪದಕ ವಿಜೇತೆ ಸಿಂಧು 8ರ ಘಟ್ಟದಲ್ಲಿ ವಿಶ್ವದ ನಂಬರ್ ಒನ್ ಆಟಗಾರ್ತಿ ತೈವಾನ್​ನ ತಾಯ್​ ಜು ಯಿಂಗ್​ ವಿರುದ್ಧ ಸೆಣಸಾಡಲಿದ್ದಾರೆ. ಯಿಂಗ್​ ಸ್ಕಾಟ್ಲೆಂಡ್​ನ ಕಿರ್ಸ್ಟಿ ಗಿಲ್ಮೋರ್​ ವಿರುದ್ಧ 21-10, 19-21, 21-11ರಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್​ ಫೈನಲ್ ಪ್ರವೇಶಿಸಿದ್ದಾರೆ.

ಪುರಷರ ಡಬಲ್ಸ್​ನಲ್ಲಿ ಸಾತ್ವಿಕ್ ಸಾಯಿರಾಜ್ ​-ಚಿರಾಗ್​ ಶೆಟ್ಟಿ ಜೋಡಿ 12 ಶ್ರೇಯಾಂಕದ ಮಲೇಷ್ಯಾ ಜೋಡಿ ವಿರುದ್ಧ 20-22, 21-18, 15-21ರ ರೋಚಕ ಹೋರಾಟದಲ್ಲಿ ಸೋಲು ಕಂಡು ನಿರಾಸೆಯನುಭವಿಸಿದರು. ಮಹಿಳಾ ಡಬಲ್ಸ್​ನಲ್ಲೂ ಅಶ್ವಿನಿ ಪೊನ್ನಪ್ಪ-ಸಿಕ್ಕಿರೆಡ್ಡಿ ಜೋಡಿ ಕೂಡ ಸೋಲುಕಂಡು ಟೂರ್ನೆಮೆಂಟ್​​ನಿಂದ ಹೊರಬಿದ್ದಿತು. ಹೆಚ್​​ಎಸ್​ ಪ್ರಣಯ್​ ಮತ್ತು ಲಕ್ಷ್ಯ ಸೇನ್ ಪ್ರತ್ಯೇಕ​ ಪುರುಷರ ಸಿಂಗಲ್ಸ್​ನಲ್ಲಿ ಇಂದು ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ:World Championships: ಕ್ವಾರ್ಟರ್ ಫೈನಲ್​ ಪ್ರವೇಶಿಸಿದ ಹಾಲಿ ಚಾಂಪಿಯನ್ ಸಿಂಧು

Last Updated : Dec 18, 2021, 2:59 PM IST

ABOUT THE AUTHOR

...view details