ಹೋ ಚಿ ಮಿನ್ಹ್(ವಿಯೆಟ್ನಾಂ):ಭಾರತದ ಶಟ್ಲರ್ ಸೌರಭ್ ವರ್ಮಾ ವಿಯೆಟ್ನಾಂ ಬ್ಯಾಡ್ಮಿಂಟನ್ ಓಪನ್ನ ಫೈನಲ್ನಲ್ಲಿ ಚೀನಾದ ಸನ್ ಫೀ ಕ್ಸಿಯಾಂಗ್ರನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಸೌರಭ್ ವರ್ಮಾ 21-12, 17-21,21-14 ರಲ್ಲಿ ಕ್ಸಿಯಾಂಗ್ರನ್ನು ಮಣಿಸಿ ವರ್ಷದ ಎರಡನೇ ಪ್ರಶಸ್ತಿಗೆ ಮುತ್ತಿಕ್ಕಿದರು. ವರ್ಮಾ ಕಳೆದ ಆಗಸ್ಟ್ನಲ್ಲಿ ಹೈದರಾಬಾದ್ ಓಪನ್ ಗೆದ್ದಿದ್ದರು.
ಪ್ರಶಸ್ತಿಗಾಗಿ ಕಠಿಣ ಪೈಪೋಟಿ ನೀಡಿದ್ದ ಚೀನಾದ ಕ್ಸಿಯಾಂಗ್ ಮೊದಲ ಗೇಮ್ ಕಳೆದುಕೊಂಡರೂ ಎರಡನೇ ಗೇಮ್ನಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿ 21-17ರಿಂದ ಗೆದ್ದು ಟೈಬ್ರೇಕರ್ ಹಂತಕ್ಕೆ ತೆಗೆದುಕೊಂಡು ಹೋದರು. ಆದರೆ ಟೈ ಬ್ರೇಕರ್ನಲ್ಲಿ ಭಾರತದ ಆಟಗಾರ ಪರಾಕ್ರಮ ಮೆರೆದು ಪ್ರಶಸ್ತಿ ಬಾಚಿಕೊಂಡರು.
38 ನೇ ಶ್ರೇಯಾಂಕದ ಸೌರಭ್ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್ನ ಮಿನೊರು ಕೊಗ್ ಅವರನ್ನು 22-20, 21-15 ರ ನೇರ ಸೆಟ್ಗಳಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದ್ದರು.