ಕರ್ನಾಟಕ

karnataka

ETV Bharat / sports

ಪಿವಿ ಸಿಂಧುಗೆ ಟೋಕಿಯೋದಲ್ಲಿ ಪದಕ ಗೆಲ್ಲುವುದು ರಿಯೋದಲ್ಲಿ ಗೆದ್ದಷ್ಟು ಸುಲಭವಲ್ಲ: ಜ್ವಾಲಾ ಗುಟ್ಟಾ

ಸಿಂಧು ಶತಕಕೋಟಿ ಭಾರತೀಯರಲ್ಲಿ ಒಲಿಂಪಿಕ್ಸ್ ಪದಕದ ನಿರೀಕ್ಷೆ ಹುಟ್ಟುಹಾಕಿರುವ ಕೆಲವು ಕ್ರೀಡಾಪಟುಗಳಲ್ಲಿ ಪಿವಿ ಸಿಂಧು ಅಗ್ರಸ್ಥಾನದಲ್ಲಿದ್ದಾರೆ. ಕೋವಿಡ್ 19 ಕಾರಣ ಪಿವಿ ಸಿಂದು ತರಬೇತಿಯ ಕೊರತೆಯುಂಟಾಗಿದೆ ಹಾಗಾಗಿ ಮಹಾನ್ ಕ್ರೀಡಾಕೂಟದಲ್ಲಿ ಸಿಂಧು ಒತ್ತಡಕ್ಕೆ ಒಳಗಾಗಬಹುದು ಎಂದು ಜ್ವಾಲಾ ಅಭಿಪ್ರಾಯಪಟ್ಟಿದ್ದಾರೆ.

ಪಿವಿ ಸಿಂಧು
ಪಿವಿ ಸಿಂಧು

By

Published : Jun 20, 2021, 10:51 PM IST

ನವದೆಹಲಿ: ವಿಶ್ವ ಚಾಂಪಿಯನ್​ ಪಿವಿ ಸಿಂಧು ಮುಂಬರುವ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಒತ್ತಡಕ್ಕೆ ಒಳಗಾಗಲಿದ್ದಾರೆ ಮತ್ತು ರಿಯೋ ಒಲಿಂಪಿಕ್ಸ್​ನಂತೆ ಇಲ್ಲಿ ಪದಕ ಗೆಲ್ಲುವುದು ಸುಲಭವಲ್ಲ ಎಂದು ಮಾಜಿ ಡಬಲ್ಸ್ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಹೇಳಿದ್ದಾರೆ.

ಶತಕಕೋಟಿ ಭಾರತೀಯರಲ್ಲಿ ಒಲಿಂಪಿಕ್ಸ್ ಪದಕದ ನಿರೀಕ್ಷೆ ಹುಟ್ಟುಹಾಕಿರುವ ಕೆಲವು ಕ್ರೀಡಾಪಟುಗಳಲ್ಲಿ ಪಿವಿ ಸಿಂಧು ಅಗ್ರಸ್ಥಾನದಲ್ಲಿದ್ದಾರೆ. ಕೋವಿಡ್ 19 ಕಾರಣ ಪಿವಿ ಸಿಂದು ತರಬೇತಿಯ ಕೊರತೆಯುಂಟಾಗಿದೆ. ಹಾಗಾಗಿ ಮಹಾನ್ ಕ್ರೀಡಾಕೂಟದಲ್ಲಿ ಸಿಂಧು ಒತ್ತಡಕ್ಕೆ ಒಳಗಾಗಬಹುದು ಎಂದು ಜ್ವಾಲಾ ಅಭಿಪ್ರಾಯಪಟ್ಟಿದ್ದಾರೆ.

ಅವರು(ಸಿಂಧು) ಪದಕ ಗೆಲ್ಲಲಿದ್ದಾರೆ ಎಂಬ ಭರವಸೆಯಿದೆ. ಆದರೆ ಕಳೆದ ಒಲಿಂಪಿಕ್ಸ್​ಗಿಂತಲೂ ಹೆಚ್ಚು ಒತ್ತಡಕ್ಕೆ ಒಳಗಾಗಲಿದ್ದಾರೆ, ರಿಯೋದಲ್ಲಿದ್ದ ಸನ್ನಿವೇಶವೇ ಸಂಪೂರ್ಣ ವಿಭಿನ್ನವಾಗಿತ್ತು. ಆದರೆ ಈಗಿನ ಸನ್ನಿವೇಶ ಬದಲಾಗಿದೆ, ಎಲ್ಲರ ಗಮನ ಅವರ ಮೇಲಿದೆ. ಹಾಗಾಗಿ ಅವರು ಒತ್ತಡವನ್ನು ಹೇಗೆ ಸಹಿಸಿಕೊಳ್ಳಲಿದ್ದಾರೆ ಎನ್ನುವುದರ ಮೇಲೆ ಎಲ್ಲವೂ ನಿಂತಿದೆ ಎಂದು ಭಾರತ ಬ್ಯಾಡ್ಮಿಂಟನ್​ನ ನಿರೀಕ್ಷೆ ಚರ್ಚೆಯಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.

" ಸಿಂಧು ನಿರೀಕ್ಷೆಯನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ರಿಯೋ ಸುಲಭವಾಗಿರಲಿಲ್ಲ, ಆದರೆ ಟೋಕಿಯೊ ಖಂಡಿತವಾಗಿಯೂ ಸುಲಭವಾಗುತ್ತದೆ. ಏಕೆಂದರೆ ಪ್ರತಿಯೊಬ್ಬರೂ ಅವರ ಆಟವನ್ನು ವೀಕ್ಷಿಸಲಿದ್ದಾರೆ ಎಂದು ಜ್ವಾಲಾ ಹೇಳಿದ್ದಾರೆ.

2ನೇ ಕೋವಿಡ್​ 19 ಅಲೆ ಭಾರತೀಯ ಆಟಗಾರರ ಮೇಲೆ ಪರಿಣಾಮ ಬೀರಿದೆ, ಅವರು ಹೆಚ್ಚಿನ ಟೂರ್ನಮೆಂಟ್​ಗಳಲ್ಲಿ ಭಾಗವಹಿಸದಂತೆ ಮಾಡಿದೆ. ಆದರೆ ಯುರೋಪ್​ನಲ್ಲಿ ಕೆಲವು ಟೂರ್ನಿಗಳು ನಡೆದಿದ್ದು, ಅಲ್ಲಿನ ಆಟಗಾರರು ಇದರ ಅನುಕೂಲ ಪಡೆದುಕೊಂಡಿದ್ದಾರೆ.

ಇದನ್ನು ಓದಿ:ಒಲಿಂಪಿಕ್​​ ಬೌಂಡ್​ ಅಥ್ಲೀಟ್​ಗಳಿಗೆ ಬಿಸಿಸಿಐನಿಂದ 10 ಕೋಟಿ.ರೂ ನೆರವು

ABOUT THE AUTHOR

...view details