ನವದೆಹಲಿ : ಭಾರತ ಸ್ಟಾರ್ ಶಟ್ಲರ್ ಕಿಡಂಬಿ ಶ್ರೀಕಾಂತ್ ಅವರು ಡೆನ್ಮಾರ್ಕ್ ಆ್ಯಂಡರ್ಸ್ ಆ್ಯಂಟೊನ್ಸನ್ ವಿರುದ್ಧ ಸೆಮಿಫೈನಲ್ಸ್ನಲ್ಲಿ ಸೋಲುವುದರೊಂದಿಗೆ ಇಂಡೋನೇಷಿಯಾ ಮಾಸ್ಟರ್ಸ್ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ಶನಿವಾರ ನಡೆದ ಸೆಮಿಫೈನಲ್ ಕದನದಲ್ಲಿ ಶ್ರೀಕಾಂತ್ ಆ್ಯಂಟೊನ್ಸನ್ ವಿರುದ್ಧ 14-21, 9-21ರ ನೇರ ಸೆಟ್ಗಳಿಂದ ಸೋಲು ಕಂಡರು. ಇದು ಶ್ರೀಕಾಂತ್ಗೆ ಡೆನ್ಮಾರ್ಕ್ ಶಟ್ಲರ್ ವಿರುದ್ಧ ಸತತ 3ನೇ ಸೋಲಾಗಿದೆ.