ಒಡನ್ಸ್: ಒಲಿಂಪಿಕ್ಸ್ ನಂತರ ವಿಶ್ರಾಂತಿ ಪಡೆದು ಅಂಗಳಕ್ಕೆ ಮರಳಿದ್ದ ವಿಶ್ವಚಾಂಪಿಯನ್ ಪಿವಿ ಸಿಂಧು ಡೆನ್ಮಾರ್ಕ್ ಓಪನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಟರ್ಕಿಯ ನೆಸ್ಲಿಹಾನ್ ಯಿಗಿತ್ ವಿರುದ್ಧ ಗೆಲುವು ಸಾಧಿಸಿ ಫ್ರೀ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ.
ಮಂಗಳವಾರ ನಡೆದ ಪಂದ್ಯದಲ್ಲಿ ಯಿಗಿತ್ ವಿರುದ್ಧ ಸಿಂಧು ಕೇವಲ 30 ನಿಮಿಷಗಳಲ್ಲಿ ಪಂದ್ಯಗಳನ್ನು ಗೆದ್ದುಕೊಂಡರು. 4ನೇ ಶ್ರೇಯಾಂಕದ ಭಾರತೀಯ ಆಟಗಾರ್ತಿ 21-12, 21-10ರಲ್ಲಿ 29ನೇ ಶ್ರೇಯಾಂಕದ ಯಿಗಿತ್ ವಿರುದ್ಧ ಸುಲಭ ಜಯ ಸಾಧಿಸಿದರು.
ಒಲಿಂಪಿಕ್ಸ್ ನಂತರ ವಿಶ್ರಾಂತಿ ಪಡೆಯುವ ಸಲುವಾಗಿ ಉಬರ್ ಕಪ್ ಫೈನಲ್ ಮತ್ತು ಸುದಿರ್ಮನ್ ಕಪ್ನಿಂದ ಹೊರಬಂದಿದ್ದ ಸಿಂಧು ಮುಂದಿನ ಸುತ್ತಿನಲ್ಲಿ ಥಾಯ್ಲೆಂಡ್ ಬುಸನನ್ ಒಗ್ಬಮ್ರುಂಗ್ಫನ್ನ್ ವಿರುದ್ಧ ಸೆಣಸಾಡಲಿದ್ದಾರೆ.
ಸಮೀರ್ , ಶ್ರೀಕಾಂತ್ ಶುಭಾರಂಭ
2017ರಲ್ಲಿ ಚಾಂಪಿಯನ್ ಆಗಿದ್ದ ಕಿಡಂಬಿ ಶ್ರೀಕಾಂತ್ ಪುರುಷರ ಸಿಂಗಲ್ಸ್ನಲ್ಲಿ ಭಾರತದವರೇ ಆದ ಬಿ. ಸಾಯಿ ಪ್ರಣೀತ್ ವಿರುದ್ಧ ಕೇವಲ 30 ನಿಮಿಷಗಳಲ್ಲಿ 21-14, 21-11ರ ನೇರ ಸೆಟ್ಗಳ ಅಂತರದಲ್ಲಿ ಪ್ರಾಬಲ್ಯಯುತ ಜಯ ಸಾಧಿಸಿದರು. 28ನೇ ಶ್ರೇಯಾಂಕದ ಸಮೀರ್ ವರ್ಮಾ ಥಾಯ್ಲೆಂಡ್ನ 21 ನೇ ಶ್ರೇಯಾಂಕದ ಕುನ್ಲವತ್ ವಿಟಿದ್ಸರ್ನ್ ವಿರುದ್ಧ 21-17, 21-14ರಲ್ಲಿ 42 ನಿಮಿಷಗಳಲ್ಲಿ ಗೆಲುವು ಸಾಧಿಸಿದರು.