ಬಾಲಿ(ಇಂಡೋನೇಷಿಯಾ) :ಇಂಡೋನೇಷಿಯಾ ಓಪನ್ನಲ್ಲಿ ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ಅವರ ಅಮೋಘ ಆಟ ಸೆಮಿಫೈನಲ್ಸ್ನಲ್ಲಿ ಅಂತ್ಯವಾಗಿದೆ. ಶನಿವಾರ ಅವರು ಥಾಯ್ಲೆಂಡ್ ರಚನಾಕ್ ಇಂಟನಾನ್ ವಿರುದ್ಧ ಸೋಲು ಕಂಡು ನಿರಾಶೆ ಅನುಭವಿಸಿದರು.
ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ 21-15, 9-21, 14-21ರಲ್ಲಿ 2ನೇ ಶ್ರೇಯಾಂಕದ ಥಾಯ್ ಶಟ್ಲರ್ ವಿರುದ್ಧ 54 ನಿಮಿಷಗಳ ಪಂದ್ಯದಲ್ಲಿ ಸೋಲು ಕಂಡರು.
ಪಿವಿ ಸಿಂಧು ವಾರದ ಹಿಂದೆಯಷ್ಟೇ ಇಂಡೋನೇಷ್ಯನ್ ಮಾಸ್ಟರ್ಸ್ನಲ್ಲಿ ಯಮಗಚಿ ವಿರುದ್ಧ ಸೆಮಿಫೈನಲ್ಸ್ನಲ್ಲಿ ಸೋಲು ಕಂಡಿದ್ದರು. ಅಕ್ಟೋಬರ್‌ನಲ್ಲಿ ಫ್ರೆಂಚ್ ಓಪನ್ನಲ್ಲೂ ಸೆಮಿಫೈನಲ್ನಲ್ಲೇ ಸೋಲು ಕಂಡಿದ್ದರು. ಇದೀಗ ಇಂಡೋನೇಷಿಯಾ ಓಪನ್ನಲ್ಲೂ ನಾಲ್ಕರ ಘಟ್ಟದಲ್ಲೇ ಸೋಲುಂಡರು.