ಕರ್ನಾಟಕ

karnataka

ETV Bharat / sports

ಫ್ರೆಂಚ್ ಓಪನ್ : ಜಪಾನ್​ನ ತಕಹಸಿ ವಿರುದ್ಧ ಸೆಮಿಫೈನಲ್​ನಲ್ಲಿ ಪಿವಿ ಸಿಂಧುಗೆ ಸೋಲು - ಫ್ರೆಂಚ್ ಓಪನ್ 2021

ಮೊದಲ ಸೆಟ್​ನಲ್ಲಿ ಒಂದು ಹಂತದಲ್ಲಿ 11-10ರ ಅಂತರದಲ್ಲಿದ್ದ ಸಿಂಧು ಸೂಪರ್​ ಕಮ್​ಬ್ಯಾಕ್ ಮಾಡಿ ಮೊದಲ ಸೆಟ್​ ಪಡೆದುಕೊಂಡರು. ಎರಡನೇ ಸೆಟ್​ನಲ್ಲೂ ಮಧ್ಯದಲ್ಲಿ 2 ಅಂಕಗಳ ಮುನ್ನಡೆ ಸಾಧಿಸಿದ್ದರು..

Sindhu loses in French Open semifinals
ಪಿವಿ ಸಿಂಧು

By

Published : Oct 30, 2021, 6:51 PM IST

ಪ್ಯಾರಿಸ್ :ಹಾಲಿ ವಿಶ್ವ ಚಾಂಪಿಯನ್​ ಭಾರತದ ಪಿವಿ ಸಿಂಧು ಫ್ರೆಂಚ್​ ಓಪನ್​ 2021ರ ಸೆಮಿಫೈನಲ್​ನಲ್ಲಿ ಸೋಲುವ ಮೂಲಕ ಒಲಿಂಪಿಕ್ಸ್​ ನಂತರ ಆಡಿದ ಎರಡೂ ಟೂರ್ನಮೆಂಟ್​ನಲ್ಲಿ ಫೈನಲ್ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ.

ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಶನಿವಾರ ನಡೆದ ಸೆಮಿಫೈನಲ್​ನಲ್ಲಿ ಜಪಾನ್​ನ ಸಯಕಾ ತಕಹಶಿ ವಿರುದ್ಧ 21-18, 16-21, 12-21 ವಿರುದ್ಧ ಒಂದು ಗಂಟೆ 8 ನಿಮಿಷಗಳ ಕಾಲ ನಡೆದ ಕಾದಾಟದಲ್ಲಿ ಸೋಲೊಪ್ಪಿಕೊಂಡಿದ್ದಾರೆ. ಸಿಂಧು ಸೋಲಿನೊಂದಿಗೆ ಫ್ರೆಂಚ್ ಓಪನ್​ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.

ಮೊದಲ ಸೆಟ್​ನಲ್ಲಿ ಒಂದು ಹಂತದಲ್ಲಿ 11-10ರ ಅಂತರದಲ್ಲಿದ್ದ ಸಿಂಧು ಸೂಪರ್​ ಕಮ್​ಬ್ಯಾಕ್ ಮಾಡಿ ಮೊದಲ ಸೆಟ್​ ಪಡೆದುಕೊಂಡರು. ಎರಡನೇ ಸೆಟ್​ನಲ್ಲೂ ಮಧ್ಯದಲ್ಲಿ 2 ಅಂಕಗಳ ಮುನ್ನಡೆ ಸಾಧಿಸಿದ್ದರು.

ಆದರೆ, ಜಪಾನ್​ ಶಟ್ಲರ್​ ಅದ್ಭುತ ಕಮ್​ಬ್ಯಾಕ್​ ಮಾಡಿ 2ನೇ ಸೆಟ್​ ಗೆದ್ದು 1-1ರಲ್ಲಿ ಸಮಬಲ ಸಾಧಿಸಿದರು. ಆದರೆ, 3ನೇ ಗೇಮ್​ನಲ್ಲಿ ಸಿಂಧುಗೆ ಜಪಾನ್ ಆಟಗಾರ್ತಿಗೆ ಕಠಿಣ ಪೈಪೋಟಿ ನೀಡಲು ವಿಫಲರಾದರು. ಕಳೆದ ವಾರ ಸಿಂಧು ಡೆನ್ಮಾರ್ಕ್​ ಓಪನ್​ನಲ್ಲಿ ಕ್ವಾರ್ಟರ್​ ಫೈನಲ್ಸ್​ನಲ್ಲೇ ಸೋತು ಹೊರ ಬಿದ್ದಿದ್ದರು.

ಇದನ್ನು ಓದಿ:ಶಾಹೀನ್​ ಅಫ್ರಿದಿಯಂತೆ ಭಾರತದ ಬ್ಯಾಟಿಂಗ್ ಶಕ್ತಿಗೆ ಪೆಟ್ಟು ನೀಡುವ ವಿಶ್ವಾಸವಿದೆ : ಟ್ರೆಂಟ್​ ಬೌಲ್ಟ್​

ABOUT THE AUTHOR

...view details