ಹೈದರಾಬಾದ್:ಕೋವಿಡ್ 19 ನಂತರ ಥಾಯ್ಲೆಂಡ್ನಲ್ಲಿ ನಡೆಯಲಿರುವ ಮೊದಲ ಅಂತಾರಾಷ್ಟ್ರೀಯ ಬ್ಯಾಂಡ್ಮಿಂಟನ್ ಟೂರ್ನಿಗೆ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಹಾಗೂ ಸೈನಾ ನೆಹ್ವಾಲ್ ಮರಳುತ್ತಿದ್ದಾರೆ. ಆದರೆ, ದೀರ್ಘ ಕಾಲದ ನಂತರ ವೃತ್ತಿಪರ ಕ್ರೀಡೆಗೆ ಮರಳವುದು ಸಿಂಧುಗೆ ಸುಲಭವಾಗಿದ್ದರೆ, ಸೈನಾಗೆ ಮುಳ್ಳಿನ ಹಾದಿಯಾಗಿದೆ.
ಕೋವಿಡ್ ಸಾಂಕ್ರಾಮಿಕದ ವಿರಾಮದ ನಂತರ ನಡೆದಿದ್ದ 2 ಟೂರ್ನಿಗಳಾದ ಡೆನ್ಮಾರ್ಕ್ ಸೂಪರ್ 750 ಮತ್ತು ಸಾರ್‌ಲಾರ್‌ಲಕ್ಸ್ ಸೂಪರ್ 100 ಟೂರ್ನಿಯಲ್ಲಿ ಸಿಂಧು ಮತ್ತು ಸೈನಾ ಭಾಗವಹಿಸಿರಲಿಲ್ಲ. ಇದೀಗ ಎಲ್ಲರ ಕಣ್ಣು ಎರಡು ಸೂಪರ್ 1000 ಈವೆಂಟ್ಗಳ ಮೇಲಿದೆ. ಮೊದಲು ಜನವರಿ 12 - 17ರವರೆಗೆ ಯೋನೆಕ್ಸ್ ಥಾಯ್ಲೆಂಡ್ ಓಪನ್ ಮತ್ತು ಜನವರಿ 19ರಿಂದ 24ರವರೆಗೆ ಟೊಯೋಟೋ ಥಾಯ್ಲೆಂಡ್ ಓಪನ್ ಟೂರ್ನಮೆಂಟ್ ನಡೆಯಲಿದ್ದು, ವೃತ್ತಿಪರ ಬ್ಯಾಡ್ಮಿಂಟನ್ಗೆ ಮರಳಲು ಇದು ವಿಶ್ವದ ಅತ್ಯುತ್ತಮ ಪಂದ್ಯಾವಳಿಗಳಾಗಿವೆ.