ವೆಲ್ವಾ(ಸ್ಪೇನ್):ಹಾಲಿ ವಿಶ್ವ ಚಾಂಪಿಯನ್ ಪಿವಿ ಸಿಂಧು ಥಾಯ್ಲೆಂಡ್ನ ಪಾರ್ನ್ಪಾವೀ ಚೊಚುವಾಂಗ್ ವಿರುದ್ಧ ನೇರ ಗೇಮ್ಗಳ ಅಂತರದಲ್ಲಿ ಗೆಲ್ಲುವ ಮೂಲಕ ಬಿಡಬ್ಲ್ಯೂಎಫ್ ವಿಶ್ವಚಾಂಪಿಯನ್ಶಿಪ್ನಲ್ಲಿ ಕ್ವಾರ್ಟರ್ ಫೈನಲ್ಸ್ ತಲುಪಿದ್ದಾರೆ.
ಗುರವಾರ ನಡೆದ ಪಂದ್ಯದಲ್ಲಿ ವಿಶ್ವದ 7ನೇ ಶ್ರೇಯಾಂಕದ ಭಾರತೀಯ ಶಟ್ಲರ್ 21-14, 21-18ರಲ್ಲಿ ಥಾಯ್ ಶಟ್ಲರ್ ವಿರುದ್ಧ ಫ್ರೀ ಕ್ವಾರ್ಟರ್ ಫೈನಲ್ನಲ್ಲಿ ಸುಲಭ ಜಯ ಸಾಧಿಸಿದರು. ಈ ಮೂಲಕ ಚೊಚುವಾಂಗ್ ವಿರುದ್ಧ ಮುಖಾಮುಖಿಯಲ್ಲಿ 5-3ರಲ್ಲಿ ಮುನ್ನಡೆ ಹೆಚ್ಚಿಸಿಕೊಂಡರು. ಅಲ್ಲದೇ ಈ ಋತುವಿನಲ್ಲಿ ಥಾಯ್ ಆಟಗಾರ್ತಿ ವಿರುದ್ಧ ಕಂಡಿದ್ದ ಸೋಲಿಗೆ ಸೇಡು ತೀರಿಸಿಕೊಂಡರು. ವಿಶ್ವ ಟೂರ್ ಫೈನಲ್ಸ್ನ ಲೀಗ್ ಮತ್ತು ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ನಲ್ಲಿ ಸಿಂದು ಸೋಲು ಕಂಡಿದ್ದರು.
ಇನ್ನು ಎರಡು ಒಲಿಂಪಿಕ್ ಪದಕ ವಿಜೇತೆ ಸಿಂಧು 8ರ ಘಟ್ಟದಲ್ಲಿ ವಿಶ್ವದ ನಂಬರ್ ಒನ್ ಆಟಗಾರ್ತಿ ತೈವಾನ್ನ ತಾಯ್ ಜು ಯಿಂಗ್ ವಿರುದ್ಧ ಸೆಣಸಾಡಲಿದ್ದಾರೆ. ಯಿಂಗ್ ಸ್ಕಾಟ್ಲೆಂಡ್ನ ಕಿರ್ಸ್ಟಿ ಗಿಲ್ಮೋರ್ ವಿರುದ್ಧ 21-10, 19-21, 21-11ರಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.