ನವದೆಹಲಿ: ವರ್ಷಾರಂಭದಲ್ಲಿ ಥಾಯ್ಲೆಂಡ್ ಓಪನ್ ಗೆದ್ದು ಬ್ಯಾಡ್ಮಿಂಟನ್ ಲೋಕಕ್ಕೆ ಅಚ್ಚರಿ ಮೂಡಿಸಿದ್ದ ಭಾರತದ ಬ್ಯಾಡ್ಮಿಂಟನ್ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ - ಚಿರಾಗ್ ಶೆಟ್ಟಿ ಫ್ರೆಂಚ್ ಓಪನ್ನಲ್ಲಿ ಫೈನಲ್ ತಲುಪುತ್ತಿದ್ದಂತೆ ಬಿಡಬ್ಲ್ಯುಎಫ್ ರ‍್ಯಾಂಕಿಂಗ್‌ನಲ್ಲಿ ಅಗ್ರ 10ರ ಗಡಿಯೊಳಗೆ ರೀ ಎಂಟ್ರಿ ಕೊಟ್ಟಿದ್ದಾರೆ.
ಈ ಟೂರ್ನಿಗೂ ಮುನ್ನ 11 ನೇ ರ‍್ಯಾಂಕಿಂಗ್‌ನಲ್ಲಿ ಸಾತ್ವಿಕ್ - ಚಿರಾಗ್ ಜೋಡಿ ಫ್ರೆಂಚ್ ಓಪನ್ನಲ್ಲಿ ಅಗ್ರ 10 ರೊಳಗಿರುವ ಜೋಡಿಗಳಿಗೆ ಶಾಕ್ ನೀಡಿ ಫೈನಲ್ಗೇರಿದ್ದರು. ಆದರೆ ಫೈನಲ್ನಲ್ಲಿ ಅಗ್ರಶ್ರೇಯಾಂಕದ ಇಂಡೊನೇಷ್ಯಾದ ಮಾರ್ಕಸ್ ಫೆರ್ನಾಲ್ಡಿ ಗಿಡಿಯೊನ್‌ಕೆವಿನ್ ಸಂಜಯ ಸುಕಮುಲ್ಜೊ ಎದುರು 18-21, 16-21 ಗೇಮ್‌ಗಳಿಂದ ಸೋಲುವ ಮೂಲಕ ಬೆಳ್ಳಿಪದಕಕ್ಕೆ ತೃಪ್ತಿಪಟ್ಟಿದ್ದರು.
ಟಾಪ್ 10ಗೆ ಎಂಟ್ರಿಕೊಟ್ಟ ಫ್ರೆಂಚ್ ಓಪನ್ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಜೋಡಿ - Satwiksairaj Rankireddy-Chirag Shetty re-enter top 10 rank
ಸಾತ್ವಿಕ್ - ಚಿರಾಗ್ ಶೆಟ್ಟಿ ಜೋಡಿ ಆದರೂ ಬಿಡಬ್ಲ್ಯುಎಫ್ ಬಿಡುಗಡೆ ಮಾಡಿದ ನೂತನ ಶ್ರೇಯಾಂಕದಲ್ಲಿ 2 ಸ್ಥಾನ ಏರಿಕೆ ಕಂಡು 9 ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ
![ಟಾಪ್ 10ಗೆ ಎಂಟ್ರಿಕೊಟ್ಟ ಫ್ರೆಂಚ್ ಓಪನ್ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಜೋಡಿ](https://etvbharatimages.akamaized.net/etvbharat/prod-images/768-512-4915047-259-4915047-1572489887309.jpg)
badminton ranking news
ಆದರೂ ಬಿಡಬ್ಲ್ಯುಎಫ್ ಬಿಡುಗಡೆ ಮಾಡಿದ ನೂತನ ಶ್ರೇಯಾಂಕದಲ್ಲಿ 2 ಸ್ಥಾನ ಏರಿಕೆ ಕಂಡು 9 ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಈ ವರ್ಷದ ಆಗಸ್ಟ್‌ನಲ್ಲಿ ಸಾತ್ವಿಕ್-ಚಿರಾಗ್ ಮೊದಲ ಬಾರಿ ಅಗ್ರ 10ರೊಳಗಿನ ರ‍್ಯಾಂಕಿಂಗ್‌ಗೆ ಲಗ್ಗೆಯಿಟ್ಟಿದ್ದರು.
ಇವರನ್ನು ಹೊರತು ಪಡಿಸಿದರೆ ಸಿಂಗಲ್ಸ್ ಆಟಗಾರ್ತಿಯರಾದ ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್ ಕ್ರಮವಾಗಿ 6 ಮತ್ತು 9ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಲಕ್ಷ್ಯ ಸೇನ್ 51ನೇ ಸ್ಥಾನಕ್ಕೆ ಜಿಗಿದಿದ್ದಾರೆ.