ಕರ್ನಾಟಕ

karnataka

ಥಾಯ್ಲೆಂಡ್ ಓಪನ್ ​: ಸೆಮಿಫೈನಲ್​ಗೆ ಅಂತ್ಯವಾದ ಸಾತ್ವಿಕ್-ಚಿರಾಗ್ ಅದ್ಭುತ ಆಟ

By

Published : Jan 23, 2021, 3:21 PM IST

ಭಾರತದ ಈ ಜೋಡಿ 2018, 2019ರಂದು ಈ ಟೂರ್ನಿಯಲ್ಲಿ ಭಾಗವಹಿಸಿತ್ತು. ಇದೇ ಮೊದಲ ಬಾರಿಗೆ ಸೂಪರ್​ 1000 ಇವೆಂಟ್​ನಲ್ಲಿ ಸೆಮಿಫೈನಲ್​ ಪ್ರವೇಶಿಸಿತ್ತು..

ಸಾತ್ವಿಕ್ ಸಾಯಿ್ ರಾಂಕಿರೆಡ್ಡಿ -ಚಿರಾಗ್ ಶೆಟ್ಟಿ
ಸಾತ್ವಿಕ್ ಸಾಯಿ್ ರಾಂಕಿರೆಡ್ಡಿ -ಚಿರಾಗ್ ಶೆಟ್ಟಿ

ಬ್ಯಾಂಕಾಕ್ ​:ಒಲಿಂಪಿಕ್ಸ್​ ಪದಕ ಭರವಸೆಯ ಜೋಡಿಯಾದ​ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್​ ಸೆಮಿಫೈನಲ್​ನಲ್ಲಿ ಸೋಲು ಕಂಡು ನಿರಾಶೆಯನುಭವಿಸಿದ್ದಾರೆ.

10ನೇ ಶ್ರೇಯಾಂಕದ ಸಾತ್ವಿಕ್-ಚಿರಾಗ್ ಇಂದು ನಡೆದ ಸೆಮಿಫೈನಲ್​ನಲ್ಲಿ 9ನೇ ಶ್ರೇಯಾಂಕದ ಮಲೇಷ್ಯಾದ ಆ್ಯರೋನ್ ಚಿಯಾ-ಸೋ ವೂಯ್ ಯಿಕ್​ ವಿರುದ್ಧ 18-21, 18-21ರರಿಂದ ಸೋಲು ಕಂಡರು.

ಭಾರತ ತಂಡದ ಈ ಜೋಡಿ 2018, 2019ರಂದು ಈ ಟೂರ್ನಿಯಲ್ಲಿ ಭಾಗವಹಿಸಿತ್ತು. ಇದೇ ಮೊದಲ ಬಾರಿಗೆ ಸೂಪರ್​ 1000 ಇವೆಂಟ್​ನಲ್ಲಿ ಸೆಮಿಫೈನಲ್​ ಪ್ರವೇಶಿಸಿತ್ತು.

ಈ ಟೂರ್ನಿಯಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಮಾತ್ರ ಉಳಿದುಕೊಂಡಿದೆ. ಈ ಜೋಡಿ ವಿಶ್ವದ 7ನೇ ಶ್ರೇಯಾಂಕದ ಒಲಿಂಪಿಕ್​ ಬೆಳ್ಳಿಪದಕ ವಿಜೇತ ಜೋಡಿಗೆ ಸೋಲು ಮೊದಲ ಬಾರಿಗೆ ಮಿಕ್ಸ್​ ಡಬಲ್ಸ್​ನಲ್ಲಿ ಸೆಮಿಫೈನಲ್​ ಪ್ರವೇಶಿಸಿದೆ.

ಟೂರ್ನಿಯಲ್ಲಿ ಪದಕದ ಭರವಸೆ ಮೂಡಿಸಿದ್ದ ಪಿವಿ ಸಿಂಧು ಕ್ವಾರ್ಟರ್ ಫೈನಲ್​ನಲ್ಲಿ ಸೋಲು ಕಂಡರೆ, ಸಮೀರ್​ ಕೂಡ ಪುರುಷರ ಕ್ವಾರ್ಟರ್​ ಫೈನಲ್​ನಲ್ಲಿ ರೋಚಕ ಹೋರಾಟ ನಡೆಸಿ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.

ABOUT THE AUTHOR

...view details