ಬ್ಯಾಂಕಾಕ್: ದೀರ್ಘಸಮಯದ ನಂತರ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್ಗೆ ಮರಳಲು ಕಾಯುತ್ತಿದ್ದ ಸೈನಾ ನೆಹ್ವಾಲ್ಗೆ ಕೊರೊನಾ ಪಾಸಿಟಿವ್ ಬಂದಿರುವುದರಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಆದರೆ ಪ್ರಣಯ್ಗೆ ನೆಗೆಟಿವ್ ಬಂದಿರುವುದರಿಂದ ಮತ್ತೊಂದು ವರದಿಗಾಗಿ ಕಾಯುತ್ತಿದ್ದಾರೆ.
ಟೂರ್ನಿಗೆ ಮೊದಲು ಸೋಮವಾರ ನಡೆಸಿದ ಕೋವಿಡ್-19 ಟೆಸ್ಟ್ನಲ್ಲಿ ಜರ್ಮನಿ, ಈಜಿಪ್ಟ್ನ ಒಬ್ಬರು ಹಾಗೂ ಭಾರತದ ಸೈನಾ ನೆಹ್ವಾಲ್ ಮತ್ತು ಸಾಯ್ ಪ್ರಣಯ್ಗೆ ಪಾಸಿಟಿವ್ ದೃಢಪಟ್ಟಿರುವುದರಿಂದ ಟೂರ್ನಿಯಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ. ಹಾಗೂ 10 ದಿನಗಳ ಕಾಲ ಕ್ವಾರಂಟೈನ್ನಲ್ಲಿರಲಿದ್ದಾರೆ ಎಂದು ಬಿಡಬ್ಲ್ಯೂಎಫ್ ತಿಳಿಸಿತ್ತು.
ಆದರೆ, ಪ್ರಣಯ್ ಸೇರಿದಂತೆ 3 ಆಟಗಾರರಿಗೆ ತಪ್ಪು ಪಾಸಿಟಿವ್ ವರದಿ ಬಂದಿರುವುದರಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟ ಮಂಗಳವಾರ ತಿಳಿಸಿದೆ.
"ಸೋಮವಾರ ಪಾಸಿಟಿವ್ ಬಂದಿದ್ದ ವರದಿಗಳನ್ನು ಮರುಪರಿಶೀಲಿಸಿದ ನಂತರ ಭಾರತದ ಒಬ್ಬ ಆಟಗಾರ ಮತ್ತು ಜರ್ಮನನಿ ಹಾಗೂ ಈಜಿಪ್ಟನ್ನ ಇಬ್ಬರು ಆಟಗಾರರಿಗೆ ನೆಗೆಟಿವ್ ಬಂದಿದೆ. ಈ ಮೂರು ಆಟಗಾರರ ವರದಿಯನ್ನು ಇಂದು ಮರುಪರಿಶೀಲನೆ ನಡೆಸಲಾಗುವುದು" ಎಂದು ಬಿಡಬ್ಲ್ಯೂಎಫ್ ಹೇಳಿಕೆ ಬಿಡುಗಡೆ ಮಾಡಿದೆ.
ಇಂದು ಪ್ರಣಯ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಅವರು ಬುಧವಾರ ಮಲೇಷ್ಯಾದ 8ನೇ ಶ್ರೇಯಾಂಕದ ಲೀ ಜಿ ಜಿಯಾ ಅವರನ್ನು ಎದುರಿಸಲಿದ್ದಾರೆ. ಆದರೆ ಸೈನಾ ವರದಿ ಮತ್ತೊಮ್ಮೆ ಪಾಸಿಟಿವ್ ಬಂದಿರುವುದರಿಂದ ಅವರು ಮತ್ತು ಅವರ ಜೊತೆ ಹೋಟೆಲ್ ರೂಮ್ ಹಂಚಿಕೊಂಡಿದ್ದ ಪತಿ ಕಶ್ಯಪ್ 10 ದಿನಗಳ ಕಾಲ ಕ್ವಾರಂಟೈನ್ಗೆ ಒಳಗಾಗಬೇಕಿದೆ.