ಬಾರ್ಸಿಲೋನಾ:ಲಂಡನ್ ಒಲಿಂಪಿಕ್ ಕಂಚಿನ ಪದಕ ವಿಜೇತೆ ಭಾರತದ ಸೈನಾ ನೆಹ್ವಾಲ್ ಉಕ್ರೈನ್ ಮರಿಯಾ ಉಲಿಟಿನಾ ವಿರುದ್ಧ ಸ್ಟ್ರೈಟ್ ಗೇಮ್ಗಳಿಂದ ಗೆದ್ದು ಬಾರ್ಸಿಲೋನಾ ಸ್ಪೈನ್ ಮಾಸ್ಟರ್ ಕ್ವಾರ್ಟರ್ ಫೈನಲ್ ಪ್ರವೇಶ ಪಡೆದಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಳ್ಳುವ ರೇಸ್ನಲ್ಲಿರುವ ಸೈನಾ ಎರಡನೇ ಸುತ್ತಿನಲ್ಲಿ ಮರಿಯಾ ವಿರುದ್ಧ 21-10, 21-19 ಗೇಮ್ಗಳಿಂದ ಭರ್ಜರಿ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ತೇರ್ಗಡೆಗೊಂಡರು.
ಸೈನಾ ಮುಂದಿನ ಸುತ್ತಿನಲ್ಲಿ ಥಾಯ್ಲೆಂಡ್ನ ಬುಸನನ್ ಒಂಗ್ಬಮ್ರುಂಗ್ಫಾನ್ ವಿರುದ್ಧ ಸೆಣಸಾಡಲಿದ್ದಾರೆ. ಸೈನಾ ಈ ಹಿಂದಿನ ಎರಡು ಮುಖಾಮುಖಿಯಲ್ಲಿ ಬುಸನನ್ ವಿರುದ್ಧ ಸೋಲನುಭವಿಸಿದ್ದಾರೆ.
ಇನ್ನು ಪುರುಷರ ವಿಭಾಗದಲ್ಲಿ ಸಮೀರ್ ವರ್ಮಾ 21-14, 16-21, 21-15 ರಲ್ಲಿ ಜರ್ಮನಿಯ ಕಾಯ್ ಸ್ಕೀಫೆರ್ ವಿರುದ್ಧ ಜಯ ಸಾಧಿಸಿ ಎಂಟರಘಟ್ಟಕ್ಕೆ ಎಂಟ್ರಿಕೊಟ್ಟಿದ್ದಾರೆ. ಇವರು ಮುಂದಿನ ಸುತ್ತಿನಲ್ಲಿ ಥಾಯ್ಲೆಂಡ್ನ ಕುನ್ಲಾವಟ್ ಅಥವಾ ಐರ್ಲೆಂಡ್ನ ನ್ಹಾಟ್ ನ್ಗುಯೆನ್ ವಿರುದ್ಧ ಸೆಣಸಾಡಲಿದ್ದಾರೆ.
ಮೊದಲ ಸುತ್ತಿನಲ್ಲೇ ಹೊರಬಿದ್ದ ಶ್ರೀಕಾಂತ್
ಇನ್ನು ಭಾರತದ ಸ್ಟಾರ್ ಆಟಗಾರ ಕಿಡಂಬಿ ಶ್ರೀಕಾಂತ್ ಮಲೇಷ್ಯಾ, ಇಂಡೋನೇಷ್ಯಾ, ಹಾಗೂ ಥಾಯ್ಲೆಂಡ್ ಓಪನ್ನಲ್ಲಿ ಮೊದಲ ಸುತ್ತಿನಲ್ಲಿ ಸೋಲನುಭವಿಸಿದಂತೆ ಈ ಟೂರ್ನಿಯಲ್ಲೂ ಭಾರತದವರೇ ಆದ ಅಜಯ್ ಜಯರಾಮ್ ವಿರುದ್ಧ 6-21, 17-21ರಲ್ಲಿ ಸೋಲುಕಾಣುವ ಮೂಲಕ ತಮ್ಮ ಒಲಿಂಪಿಕ್ ಕನಸನ್ನು ಮತ್ತಷ್ಟು ಕಠಿಣಪಡಿಸಿಕೊಂಡಿದ್ದಾರೆ.