ಕರ್ನಾಟಕ

karnataka

ETV Bharat / sports

ಫ್ರೆಂಚ್​ ಓಪನ್​ ಕ್ವಾರ್ಟರ್​ಫೈನಲ್​ ಪ್ರವೇಶಿಸಿದ ಸೈನಾ- ಸಿಂಧು - ಫ್ರೆಂಚ್​ ಓಪನ್​ ಕ್ವಾರ್ಟರ್​ಫೈನಲ್

ವಿಶ್ವದ 6ನೇ ಶ್ರೇಯಾಂಕದ ಪಿವಿ ಸಿಂಧು ಸಿಂಗಾಪುರದ ಜಿಯಾ ಮಿನ್​ ಯೊ ಅವರನ್ನು 21-10, 21-13 ರಲ್ಲಿ ಮಣಿಸುವ ಮೂಲಕ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ.

French Open

By

Published : Oct 25, 2019, 6:11 AM IST

ಪ್ಯಾರಿಸ್​: ಪ್ರಶಸ್ತಿ ಬರ ಎದುರಿಸುತ್ತಿರುವ ಸೈನಾ ನೆಹ್ವಾಲ್​ ಹಾಗೂ ವಿಶ್ವಚಾಂಪಿಯನ್​ಶಿಪ್ ಗೆದ್ದ ನಂತರ ಸ್ಥಿರ ಪ್ರದರ್ಶನ ತೋರಲು ವಿಫಲರಾಗುತ್ತಿರುವ ಪಿವಿ ಸಿಂಧು ಫ್ರೆಂಚ್​ ಓಪನ್​ನಲ್ಲಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ.

ವಿಶ್ವದ 6ನೇ ಶ್ರೇಯಾಂಕದ ಪಿವಿ ಸಿಂಧು ಸಿಂಗಾಪುರದ ಜಿಯಾ ಮಿನ್​ ಯೊ ಅವರನ್ನು 21-10, 21-13 ರಲ್ಲಿ ಮಣಿಸುವ ಮೂಲಕ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ.

ಮತ್ತೊಬ್ಬ ಸ್ಟಾರ್​ ಆಟಗಾರ್ತಿ ಸೈನಾ ನೆಹ್ವಾಲ್​ 21-10, 21-11 ರಲ್ಲಿ ಡೆನ್ಮಾರ್ಕ್​ನ ಲೈನ್‌ ಮಾರ್ಕ್‌ ಜಾರ್ಸ್‌ ಫೆಲ್ಡ್‌ ವಿರುದ್ಧ ಗೆಲುವು ಸಾಧಿಸಿ ಭಾರತದ ಪರ ಮೊದಲಿಗರಾಗಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದರು.​ ಸೈನಾ ಮುಂದಿನ ಸುತ್ತಿನಲ್ಲಿ 16 ಶ್ರೇಯಾಂಕದ ದಕ್ಷಿಣ ಕೊರಿಯಾದ ಆನ್​ ಸೆ ಯಂಗ್​ ವಿರುದ್ಧ ಸೆಣಸಾಡಲಿದ್ದಾರೆ.

ಡಬಲ್ಸ್​ ವಿಭಾಗದಲ್ಲಿ ಸಾಥ್ವಿಕ್​- ಚಿರಾಗ್​ ಜೋಡಿ ವಿಶ್ವದ 2ನೇ ಶ್ರೇಯಾಂಕದ ಇಂಡೋನೇಷ್ಯಾ ಜೋಡಿಯಾದ ಮೊಹಮ್ಮದ್​ ಅಹ್ಸಾನ್​​ ಮತ್ತು ಹೆಂದ್ರ ಸತ್ಯವಾನ್ ವಿರುದ್ಧ 21-18, 18-21, 21-13 ರಲ್ಲಿ ಮಣಿಸುವ ಮೂಲಕ ಆಶ್ವರ್ಯಕರ ಗೆಲುವು ಸಾಧಿಸಿದ್ದಾರೆ.​

ABOUT THE AUTHOR

...view details