ಬಾಸೆಲ್ [ಸ್ವಿಟ್ಜರ್ಲೆಂಡ್]:ಬ್ಯಾಡ್ಮಿಂಟನ್ ಆಟಗಾರಾದ ಸೈನಾ ನೆಹ್ವಾಲ್ ಮತ್ತು ಪರುಪಲ್ಲಿ ಕಶ್ಯಪ್ ದಂಪತಿ ಮೊದಲ ಸುತ್ತಿನಲ್ಲೇ ಸ್ವಿಸ್ ಓಪನ್ನಿಂದ ಹೊರ ಬಿದ್ದಿದೆ.
ಯುವ ಆಟಗಾರರಾದ ಸಾಯಿ ಪ್ರಣೀತ್, ಸೌರಭ್ ವರ್ಮಾ ಮತ್ತು ಅಜಯ್ ಜಯರಾಮ್ ಆರಂಭಿಕ ಸುತ್ತಿನಲ್ಲಿ ಆಯಾ ಪಂದ್ಯಗಳನ್ನು ಗೆದ್ದ ನಂತರ ಪಂದ್ಯಾವಳಿಯ ಎರಡನೇ ಸುತ್ತಿಗೆ ಮುನ್ನಡೆ ಪಡೆದಿದ್ದರು.
ಒಲಿಂಪಿಕ್ ಪದಕ ವಿಜೇತ ನೆಹ್ವಾಲ್ ಥಾಯ್ಲೆಂಡ್ನ ಫಿಟ್ಟಾಯಪೋರ್ನ್ ಚೈವಾನ್ ವಿರುದ್ಧ ಸುಮಾರು 58 ನಿಮಿಷಗಳ ಕಾಲ ಕಠಿಣ ಹೋರಾಟ ನಡೆಸಿದರು. ಆದರೆ, ಕೊನೆಗೆ 16-21, 21-17, 21-23 ಸೆಟ್ಗಳ ಅಂತರದಲ್ಲಿ ಚೈವಾನ್ ವಿರುದ್ಧ ಅಜೇಯರಾದರು.
ಇನ್ನು ನೆಹ್ವಾಲ್ ಪತಿ ಕಶ್ಯಪ್ ನೇರ ಪಂದ್ಯಗಳಲ್ಲಿ ಸ್ಪೇನ್ನ ಪ್ಯಾಬ್ಲೊ ಅಬಿಯಾನ್ ವಿರುದ್ಧ 15-21, 10-21 ಸೆಟ್ಗಳಲ್ಲಿ ಸೋಲು ಅನುಭವಿಸಿದರು.
ಇನ್ನು ಮೊದಲನೇ ಸುತ್ತನಲ್ಲಿ ಉತ್ತ ಪ್ರದರ್ಶನ ತೋರಿದ ಪ್ರಣೀತ್, ಮುಂದಿನ ಸುತ್ತಿಗೆ ಮುನ್ನಡೆಯಲು ಕೇವಲ 34 ನಿಮಿಷಗಳಲ್ಲಿ ಇಸ್ರೇಲ್ನ ಮಿಶಾ ಜಿಲ್ಬರ್ಮನ್ ಅವರನ್ನು 21-11,21-14ರಿಂದ ಹಿಂದಿಕ್ಕಿದರು.
ಓದಿ: ಟರ್ಕಿಯ ಯಿಗಿಟ್ ಸೋಲಿಸಿ ಎರಡನೇ ಸುತ್ತು ಪ್ರವೇಶಿಸಿದ ಸಿಂಧು
ಅದರಂತೆ ವರ್ಮಾ ತನ್ನ ಮೊದಲ ಸುತ್ತಿನ ಹಣಾಹಣಿಯಲ್ಲಿ ಸ್ವಿಟ್ಜರ್ಲೆಂಡ್ನ ಕ್ರಿಶ್ಚಿಯನ್ ಕಿರ್ಚ್ಮೇರ್ ವಿರುದ್ಧ 21-19 21-18 ರಿಂದ ಜಯಗಳಿಸಿದರು. ಅವರು 16 ನೇ ಸುತ್ತಿನಲ್ಲಿ ಎಂಟು ಶ್ರೇಯಾಂಕದ ಥಾಯ್ಲೆಂಡ್ನ ಕುನ್ಲಾವುತ್ ವಿಟಿಡ್ಸರ್ನ್ ಅವರನ್ನು ಎದುರಿಸಲಿದ್ದಾರೆ.
ಇನ್ನು ಅಜಯ್ ಜಯರಾಮ್ 21-12 21-13ರಲ್ಲಿ ಥಾಯ್ಲೆಂಡ್ನ ಸಿತಿಕೋಮ್ ತಮ್ಮಸಿನ್ ಅವರನ್ನು ಸೋಲಿಸಿ 16 ನೇ ಸುತ್ತಿಗೆ ಪ್ರವೇಶಿಸಿದ್ದು, ಮೂರನೇ ಶ್ರೇಯಾಂಕದ ಡೆನ್ಮಾರ್ಕ್ನ ರಾಸ್ಮಸ್ ಜೆಮ್ಕೆ ಅವರನ್ನು ಎದುರಿಸಲಿದ್ದಾರೆ.