ಕರ್ನಾಟಕ

karnataka

ETV Bharat / sports

ವರ್ಷದ ಮೊದಲ ಟೂರ್ನಿಯಲ್ಲಿ ಸೈನಾ ನೆಹ್ವಾಲ್​ ಶುಭಾರಂಭ​... ಹೊರಬಿದ್ದ ಶ್ರೀಕಾಂತ್​, ಪ್ರಣೀತ್ - ಕಿಡಂಬಿ ಶ್ರೀಕಾಂತ್-ಸಾಯಿ ಪ್ರಣೀತ್​ಗೆ ಸೋಲು

2020ರಲ್ಲಿ ನಡೆಯುತ್ತಿರುವ ಮೊದಲ ಟೂರ್ನಿಯಲ್ಲಿ ಸೈನಾ ನೆಹ್ವಾಲ್ ಬೆಲ್ಜಿಯಂನ ಲಿಯಾನ್ನೆ ಅವರನ್ನು ಮಣಿಸಿ ಶುಭಾರಂಭ ಮಾಡಿದ್ದಾರೆ.

Malaysia Masters
Malaysia Masters

By

Published : Jan 8, 2020, 4:00 PM IST

ಕ್ವಾಲಾಲಂಪುರ: ಭಾರತದ ಸ್ಟಾರ್​ ಮಹಿಳಾ ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್​ ವರ್ಷದ ಮೊದಲ ಟೂರ್ನಿಯಾದ ಮಲೇಷ್ಯಾ ಮಾಸ್ಟರ್​ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

2012 ರ ಒಲಿಂಪಿಕ್​ನಲ್ಲಿ ಕಂಚು ಗೆದ್ದಿರುವ ಸೈನಾ ನೆಹ್ವಾಲ್​ ಬೆಲ್ಜಿಯಂನ ಲಿಯಾನ್ನೆ ತಾನ್​ ಅವರನ್ನು 21-15,21-17ರಲ್ಲಿ ಮಣಿಸಿ ದ್ವಿತೀಯ ಸುತ್ತಿಗೆ ಪ್ರವೇಶ ಪಡೆದರು. ಸೈನಾ ಕೇವಲ 35 ನಿಮಿಷಗಳಲ್ಲಿ ಈ ಪಂದ್ಯವನ್ನು ಗೆದ್ದುಕೊಂಡರು.

ಕಿಡಂಬಿ ಶ್ರೀಕಾಂತ್​

ಆದರೆ ಪುರುಷರ ವಿಭಾಗದಲ್ಲಿ ಕಿಡಂಬಿ ಶ್ರೀಕಾಂತ್​ ಅವರು ಚೀನಾದ ತೈಪೆಯ ಚೋ ತೈನ್​ ಚೆನ್ ವಿರುದ್ಧ ಸೋಲನುಭವಿಸಿ ನಿರಾಶೆ ಅನುಭವಿಸಿದರು. ಶ್ರೀಕಾಂತ್​​ 17-21, 5-21 ರಲ್ಲಿ ತೈನ್ ಚೆನ್​​ಗೆ ಶರಣಾದರು.

ಇದಕ್ಕೂ ಮುನ್ನ ನಡೆದ ಮತ್ತೊಂದು ಪುರುಷರ ಪಂದ್ಯದಲ್ಲಿ ಡೆನ್ಮಾರ್ಕ್​ನ ರಾಸ್ಮಸ್​ ಗೆಮ್ಕೆ ವಿರುದ್ಧ 21-11, 21-15ರಲ್ಲಿ ಸಾಯಿ ಪ್ರಣೀತ್​ ಸೋಲನುಭವಿಸಿದರು. ಮಂಗಳವಾರ ಡಬಲ್ಸ್​ ವಿಭಾಗದ ಸ್ಟಾರ್​ ಆಟಗಾರರಾದ ಸಾಥ್ವಿಕ್​-ಚಿರಾಗ್​ ಶೆಟ್ಟಿ ಜೋಡಿ ಕೂಡ ಸೋಲನುಭವಿಸಿತ್ತು.

ಸಾಯಿ ಪ್ರಣೀತ್​

ABOUT THE AUTHOR

...view details