ಪ್ಯಾರೀಸ್:ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಫ್ರಾನ್ಸ್ನ ಮೇರಿ ಬಟೋಮೆನೆ ಅವರನ್ನು ಮಣಿಸುವ ಮೂಲಕ ಒರ್ಲಿಯನ್ಸ್ ಮಾಸ್ಟರ್ಸ್ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದರು.
ಭಾರತೀಯ ಆಟಗಾರ್ತಿ 18-21, 21-15, 21-10ರಲ್ಲಿ ಸ್ಥಳೀಯ ಆಟಗಾರ್ತಿಯನ್ನು ಮಣಿಸಿದರು. ಮೊದಲ ಗೇಮ್ನಲ್ಲಿ ಸೋಲುಂಡ ಸೈನಾ ನಂತರ 2 ಗೇಮ್ಗಳಲ್ಲಿ ಅದ್ಭುತವಾಗಿ ತಿರುಗಿ ಬಿದ್ದು ವಿಜಯ ಸಾಧಿಸಿದರು. ಈ ಟೂರ್ನಿಯು ಕೂಡಾ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್‌ನ (ಬಿಡಬ್ಲ್ಯುಎಫ್) ಪರಿಷ್ಕೃತಗೊಂಡ ಒಲಿಂಪಿಕ್ ಅರ್ಹತಾ ಅವಧಿಯ ಭಾಗವಾಗಿದೆ.