ಕರ್ನಾಟಕ

karnataka

ETV Bharat / sports

ಚಿನ್ನದ ಹುಡುಗಿಯ ಕಠಿಣ ಅಭ್ಯಾಸ ನೋಡಿ ಸುಸ್ತಾದ ಆನಂದ್ ಮಹೀಂದ್ರಾ..! - ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​

ಪಿ.ವಿ.ಸಿಂಧು ತರಬೇತಿಯ ವಿಡಿಯೋ ಒಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಖ್ಯಾತ ಉದ್ಯಮಿ ಆನಂದ್ ಮಹೀಂದ್ರ, ವಿಡಿಯೋ ನೋಡಿ ನಿಜಕ್ಕೂ ಸುಸ್ತಾಗಿ ಹೋದೆ ಎಂದು ಬರೆದುಕೊಂಡಿದ್ದಾರೆ.

ಆನಂದ್ ಮಹೀಂದ್ರ

By

Published : Aug 28, 2019, 2:40 PM IST

ಹೈದರಾಬಾದ್: ಇತ್ತೀಚೆಗೆ ಮುಕ್ತಾಯವಾದ ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​ನಲ್ಲಿ ಭಾರತದ ಆಟಗಾರ್ತಿ ಪಿ.ವಿ.ಸಿಂಧು ಚಿನ್ನ ಗೆಲ್ಲುವ ಮೂಲಕ ದೇಶಕ್ಕೇ ಹೆಮ್ಮೆ ತಂದಿದ್ದಾಳೆ. ಈ ಸಾಧನೆಯ ಹಿಂದೆ ಕಠಿಣ ಪರಿಶ್ರಮ ಅಡಗಿದೆ ಎನ್ನುವುದು ಆಕೆಯ ತರಬೇತಿಯ ವಿಡಿಯೋದಲ್ಲಿ ತಿಳಿದು ಬಂದಿದೆ.

ಪಿ.ವಿ.ಸಿಂಧು ತರಬೇತಿಯ ವಿಡಿಯೋ ಒಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಖ್ಯಾತ ಉದ್ಯಮಿ ಆನಂದ್ ಮಹೀಂದ್ರ, ವಿಡಿಯೋ ನೋಡಿ ನಿಜಕ್ಕೂ ಸುಸ್ತಾಗಿ ಹೋದೆ ಎಂದು ಬರೆದುಕೊಂಡಿದ್ದಾರೆ.

ಒಂದು ನಿಮಿಷದ ವಿಡಿಯೋದಲ್ಲಿ ಚಿನ್ನದ ಹುಡುಗಿ ಸಿಂಧು ಕಠಿಣ ತರಬೇತಿಯ ಕೆಲ ತುಣುಕುಗಳಿವೆ. ಕೇವಲ ಈ ವಿಡಿಯೋ ನೋಡಿಯೇ ನಾನು ಸುಸ್ತಾದೆ. ಸಿಂಧು ಯಾಕೆ ವಿಶ್ವ ಚಾಂಪಿಯನ್​ ಎನ್ನುವುದರಲ್ಲಿ ಯಾವುದೇ ರಹಸ್ಯ ಅಡಗಿಲ್ಲ. ಪ್ರವರ್ಧಮಾನಕ್ಕೆ ಬರುತ್ತಿರುವ ಎಲ್ಲ ಕ್ರೀಡಾಳುಗಳು ಸಿಂಧುರಂತೆ ಕ್ರೀಡೆಗಾಗಿ ಕಠಿಣ ಅಭ್ಯಾಸ ನಡೆಸಿ ಎಂದು ಆನಂದ್ ಮಹೀಂದ್ರ ಸೂಚನೆ ನೀಡಿದ್ದಾರೆ.

ಭಾನುವಾರದಂದು ಜಪಾನಿನ ನೊಜೊಮಿ ಒಕುಹಾರರನ್ನು ಸೋಲಿಸಿ ಪಿ.ವಿ.ಸಿಂಧು ಚಿನ್ನಕ್ಕೆ ಕೊರಳೊಡ್ಡಿದ್ದಳು. ಈ ಮೂಲಕ ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​​ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎನ್ನುವ ಹೆಗ್ಗಳಿಕೆ ಸಿಂಧು ಪಾಲಾಗಿದೆ.

ABOUT THE AUTHOR

...view details