ಕರ್ನಾಟಕ

karnataka

ETV Bharat / sports

ಭಾರತಕ್ಕೆ ಬಂದಿಳಿದ ಚಿನ್ನದ ಹುಡುಗಿ: ಇಂದು ಮೋದಿ ಭೇಟಿ..! - ನೊಜೊಮಿ ಒಕುಹಾರ

ಬಿಡಬ್ಲ್ಯುಎಫ್​​​ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎನ್ನುವ ಹೆಗ್ಗಳಿಕೆ ಪಾತ್ರವಾಗಿರುವ ಪಿ.ವಿ.ಸಿಂಧು ಇಂದು ಕೇಂದ್ರ ಕ್ರೀಡಾ ಸಚಿವ ಕಿರಣ್​ ರಿಜಿಜು ಅವರನ್ನೂ ಸಹ ಬೇಟಿ ಮಾಡಲಿದ್ದಾರೆ.

ಪಿ.ವಿ.ಸಿಂಧು

By

Published : Aug 27, 2019, 10:49 AM IST

ನವದೆಹಲಿ:ಬಿಡಬ್ಲ್ಯುಎಫ್​​​ ವಿಶ್ವ ಚಾಂಪಿಯನ್​ಶಿಪ್​​ ಸ್ವರ್ಣ ಪದಕ ವಿಜೇತೆ ಪಿ.ವಿ.ಸಿಂಧು ನಿನ್ನೆ ತಡರಾತ್ರಿ ಭಾರತಕ್ಕೆ ಆಗಮಿಸಿದ್ದು, ಇಂದು ಪ್ರಧಾನಿ ಮೋದಿಯನ್ನು ಭೇಟಿ ಮಾಡಲಿದ್ದಾರೆ.

ಐತಿಹಾಸಿಕ ದಾಖಲೆ ಬರೆದ ಪಿ.ವಿ.ಸಿಂಧು... ಕೊನೆಗೂ ಚಿನ್ನಕ್ಕೆ ಮುತ್ತಿಕ್ಕಿದ ಮುತ್ತಿನ ಬೆಡಗಿ!

ಬಿಡಬ್ಲ್ಯುಎಫ್​​​ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎನ್ನುವ ಹೆಗ್ಗಳಿಕೆ ಪಾತ್ರವಾಗಿರುವ ಪಿ.ವಿ.ಸಿಂಧು ಇಂದು ಕೇಂದ್ರ ಕ್ರೀಡಾ ಸಚಿವ ಕಿರಣ್​ ರಿಜಿಜು ಅವರನ್ನೂ ಸಹ ಬೇಟಿ ಮಾಡಲಿದ್ದಾರೆ.

ತವರಿಗೆ ಆಗಮಿಸಿದ ಚಿನ್ನದ ಹುಡುಗಿ... ಪಿ.ವಿ.ಸಿಂಧುಗೆ ಭರ್ಜರಿ ಸ್ವಾಗತ

ಬಿಡಬ್ಲ್ಯುಎಫ್ ವರ್ಲ್ಡ್​ ಚಾಂಪಿಯನ್​ಶಿಪ್​​​ ಫೈನಲ್​​ನಲ್ಲಿ ಜಪಾನ್​​ನ ನೊಜೊಮಿ ಒಕುಹಾರ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಸಿಂಧು ಐತಿಹಾಸಿಕ ಸಾಧನೆಗೆ ಪ್ರಧಾನಿ ಮೋದಿ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಶುಭಾಶಯ ಕೋರಿದ್ದರು.

ABOUT THE AUTHOR

...view details