ಕರ್ನಾಟಕ

karnataka

ETV Bharat / sports

ವಿಶ್ವಚಾಂಪಿಯನ್​ಶಿಪ್​ನಲ್ಲಿ ​ಚಿನ್ನ ಗೆದ್ದ ಸಿಂಧುಗೆ BMW ಕಾರು ಉಡುಗೊರೆ ನೀಡಿದ ಮಾಜಿ ಕ್ರಿಕೆಟರ್ - ಮಾಜಿ ಕ್ರಿಕೆಟಿಗ ವಿ.ಚಾಮುಂಡೇಶ್ವರನಾಥ್

ತೆಲಂಗಾಣ ಬ್ಯಾಡ್ಮಿಂಟನ್​ ಅಸೋಸಿಯೇಷನ್​ನ ಉಪಾಧ್ಯಕ್ಷ ವಿ.ಚಾಮುಂಡೇಶ್ವರ ನಾಥ್​ ಭಾರತ ತಂಡದ ಬ್ಯಾಡ್ಮಿಂಟನ್​ ಕೋಚ್​ ಗೋಪಿಚಂದ್​ ಹಾಗೂ ಟಾಲಿವುಡ್​ ನಟ ನಾಗಾರ್ಜುನ್​ ಅಕ್ಕಿನೇನಿ ನೇತೃತ್ವದಲ್ಲಿ  BMW ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

P.V. Sindhu

By

Published : Sep 14, 2019, 7:39 PM IST

ಹೈದರಾಬಾದ್: ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಪ್ರಪಂಚದಾದ್ಯಂತ ಹಾರಿಸಿದ ಪಿವಿ ಸಿಂಧುಗೆ ಮಾಜಿ ಕ್ರಿಕೆಟಿಗ ವಿ.ಚಾಮುಂಡೇಶ್ವರನಾಥ್​ BMW ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ತೆಲಂಗಾಣ ಬ್ಯಾಡ್ಮಿಂಟನ್​ ಅಸೋಸಿಯೇಷನ್​ನ ಉಪಾಧ್ಯಕ್ಷ ವಿ.ಚಾಮುಂಡೇಶ್ವರ ನಾಥ್​ ಭಾರತ ತಂಡದ ಬ್ಯಾಡ್ಮಿಂಟನ್​ ಕೋಚ್​ ಗೋಪಿಚಂದ್​ ಹಾಗೂ ಟಾಲಿವುಡ್​ ನಟ ನಾಗಾರ್ಜುನ್​ ಅಕ್ಕಿನೇನಿ ನೇತೃತ್ವದಲ್ಲಿ BMW ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಚಾಮುಂಡೇಶ್ವರನಾಥ್​ ಅವರು ಕಾರಿಗಾಗಿ ಕ್ರೀಡೆಯನ್ನು ಪ್ರೋತ್ಸಾಹಿಸುವ ಕಾರ್ಪೋರೇಟ್​ ಕಂಪನಿಯ ಮಾಲಿಕರಿಂದ, ಅವರ ಸ್ನೇಹಿತರಿಂದ ಹಣ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

ಸಿಂಧು ಚಿನ್ನ ಗೆದ್ದ ಸಮಯ ನನ್ನ ಜೀವನ್ ಅತ್ಯಂತ ಹೆಮ್ಮೆಯ ಸಂಗತಿ ಎಂದಿರುವ ಸಿಂಧು ಕೋಚ್​ ಗೋಪಿಚಂದ್​ ಇದು ಭಾರತದ ಕ್ರೀಡೆಯಲ್ಲಿ ಅತ್ಯಂತ ಮಹತ್ವದ ಸಂದರ್ಭವಾಗಿದೆ. ಇನ್ನು ಒಲಿಂಪಿಕ್​ನಲ್ಲಿ ಚಿನ್ನ ಗೆಲ್ಲುವ ಕನಸು ಇಟ್ಟುಕೊಂಡಿರುವ ಸಿಂಧುಗೆ ಕೇವಲ ಇನ್ನೊಂದೇ ಒಂದು ಹಂತ ಬಾಕಿಯಿದೆ ಎಂದುಕೊಂಡಿದ್ದೇನೆ ಎಂದು ಗೋಪಿಚಂದ್​ ಶಿಷ್ಯೆ ಸಾಧನೆಯನ್ನು ಕೊಂಡಾಡಿದ್ದಾರೆ.

ABOUT THE AUTHOR

...view details