ಗ್ಯಾಂಗ್ಝು(ಹಾಂಕಾಂಗ್):ಬಿಡಬ್ಲ್ಯು ವರ್ಲ್ಡ್ ಟೂರ್ ಫೈನಲ್ಸ್ನ ಪ್ರಥಮ ಪಂದ್ಯದಲ್ಲೇ ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಪರಾಭವಗೊಂಡಿದ್ದಾರೆ.
68 ನಿಮಿಷ ನಡೆದ ಪಂದ್ಯದಲ್ಲಿ 21-18, 18-21 ಹಾಗೂ 8-21 ಸೆಟ್ಗಳಿಂದ ಜಪಾನ್ನ ಅಕನೆ ಯಮಗುಚಿಗೆ ಶರಣಾಗಿದ್ದಾರೆ. ಮೊದಲ ಸೆಟ್ ಗೆದ್ದು ನಿರೀಕ್ಷೆ ಮೂಡಿಸಿದ್ದ ಸಿಂಧು ಎರಡನೇ ಸೆಟ್ನಲ್ಲೂ ಉತ್ತಮ ಪೈಪೋಟಿ ನೀಡಿದ್ದರು. ಆದರೆ ನಿರ್ಣಾಯಕ ಸೆಟ್ನಲ್ಲಿ ನೀರಸ ಪ್ರದರ್ಶನದ ಪರಿಣಾಮ ಸೋಲೊಪ್ಪಿಕೊಳ್ಳಬೇಕಾಯಿತು.