ಕರ್ನಾಟಕ

karnataka

ETV Bharat / sports

ಮಲೇಷ್ಯಾ ಮಾಸ್ಟರ್ ಟೂರ್ನಿ: ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ವಿಶ್ವ ಚಾಂಪಿಯನ್ ಪಿ ವಿ​ ಸಿಂಧು - ಮಲೇಷ್ಯಾ ಮಾಸ್ಟರ್

24 ವರ್ಷದ ಪಿ ವಿ ಸಿಂಧು ಎರಡನೇ ಸುತ್ತಿನ ಪಂದ್ಯದಲ್ಲಿ ಜಪಾನ್​ನ ಅಯಾ ಒಹೋರಿ ಅವರನ್ನು 21-10, 21-15ರ ನೇರ ಗೇಮ್​ಗಳಲ್ಲಿ ಮಣಿಸಿದರು.

World Champion PV Sindhu
ಪಿವಿ ಸಿಂಧು

By

Published : Jan 9, 2020, 5:26 PM IST

ಕ್ವಾಲಾಲಂಪುರ್​: ಹಾಲಿ ವಿಶ್ವಚಾಂಪಿಯನ್​ ಪಿ ವಿ ಸಿಂಧು ಮಲೇಷ್ಯಾ ಮಾಸ್ಟರ್​ ಟೂರ್ನಿಯಲ್ಲಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ.

24 ವರ್ಷದ ಪಿ ವಿ ಸಿಂಧು ಎರಡನೇ ಸುತ್ತಿನ ಪಂದ್ಯದಲ್ಲಿ ಜಪಾನ್​ನ ಅಯಾ ಒಹೋರಿ ವಿರುದ್ಧ21-10, 21-15ರ ನೇರ ಗೇಮ್​ಗಳಲ್ಲಿ ಜಯ ಸಾಧಿಸಿದರು. ವಿಶ್ವದ 6ನೇ ಶ್ರೇಯಾಂಕದಲ್ಲಿರುವ ಸಿಂಧು ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಚೀನಾದ ನಂಬರ್​ 1 ಆಟಗಾರ್ತಿ ತಾಯ್​ ತ್ಜುಂಗ್​ ಯಿಂಗ್​ ವಿರುದ್ಧ ಶುಕ್ರವಾರ ಸೆಣಸಾಡಲಿದ್ದಾರೆ.

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಸೈನಾ ನೆಹ್ವಾಲ್​ ದಕ್ಷಿಣ ಕೊರಿಯಾದ ಶೆಟ್ಲರ್​ ಆ್ಯನ್​ ಶೆ ಯಂಗ್​ ಅವರನ್ನು 25-23, 21-12 ರ ನೇರ ಗೇಮ್​ಗಳ ಅಂತರದಿಂದ ಗೆಲುವು ಸಾಧಿಸಿ ಕ್ವಾರ್ಟರ್​ ಫೈನಲ್​ ​ಪ್ರವೇಶಿಸಿದರು.

ನಾಳೆ ರೋಚಕ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಸಿಂಧು ವಿಶ್ವದ ನಂಬರ್​ ಒನ್​ ಆಟಗಾರ್ತಿ ತಾಯ್​ ತ್ಜುಂಗ್​ ಯಿಂಗ್​ ವಿರುದ್ಧ ಹಾಗೂ ಸೈನಾ ಒಲಿಂಪಿಕ್​ ಚಾಂಪಿಯನ್​ ಸ್ಪೇನಿನ ಕರೋಲಿನ ಮೆರಿನ್​ ವಿರುದ್ಧ ಆಡಲಿದ್ದಾರೆ.

ಇನ್ನು, ಪುರುಷರ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಪ್ರಣಯ್​ ರಾಯ್ ಅವರು​ ಜಪಾನ್​ನ ನಂಬರ್​ ಒನ್ ಆಟಗಾರ ಕೆಂಟೊ ಮೊಮೊಟ ವಿರುದ್ಧ 14-121, 16-21 ರಲ್ಲಿ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ABOUT THE AUTHOR

...view details