ಕರ್ನಾಟಕ

karnataka

ETV Bharat / sports

ಥಾಯ್ಲೆಂಡ್​​​​​ ಓಪನ್: ಕ್ವಾರ್ಟರ್​​​ಫೈನಲ್​​ನಲ್ಲಿ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದ ಸಿಂಧು - ಥಾಯ್ಲೆಂಡಿನ ರಚನೋಕ್‌ ಇಂತಾನನ್

ವಿಶ್ವದ ನಂ.1 ಆಟಗಾರ್ತಿ ರಚನೋಕ್ ಇಂತಾನನ್‌ ಅವರು ಕೇವಲ 38 ನಿಮಿಷಗಳ ಕಾಲ ನಡೆದ ಆಟದಲ್ಲಿ 21-13, 21-9ರ ಅಂತರದಲ್ಲಿ ಪಿ.ವಿ.ಸಿಂಧು ಅವರನ್ನು ಸೋಲಿಸಿದರು.

PV Sindhu crashes out of Thailand Open
ಪಿ.ವಿ.ಸಿಂಧು

By

Published : Jan 22, 2021, 9:21 PM IST

ಬ್ಯಾಂಕಾಕ್‌​: ಶುಕ್ರವಾರ ನಡೆದ ಕ್ವಾರ್ಟರ್​​ ಫೈನಲ್​​ ಹಣಾಹಣಿಯಲ್ಲಿ ಭಾರತದ ಷಟ್ಲರ್​​ ಪಿ.ವಿ.ಸಿಂಧು ಅವರು ಥಾಯ್ಲೆಂಡಿನ ರಚನೋಕ್‌ ಇಂತಾನನ್‌ ವಿರುದ್ಧ ಪರಾಭವಗೊಂಡು ಥಾಯ್ಲೆಂಡ್​​​​​ ಓಪನ್ ಬಿಡಬ್ಲ್ಯೂಎಫ್ ಸೂಪರ್-1000 ಟೂರ್ನಿಯಿಂದ ಹೊರಬಿದ್ದರು.

ಆರಂಭದಿಂದಲೇ ಆಟದಲ್ಲಿ ಮೇಲುಗೈ ಸಾಧಿಸಿದ ವಿಶ್ವದ ನಂ.1 ಆಟಗಾರ್ತಿ ಇಂತಾನನ್‌, ಕೇವಲ 38 ನಿಮಿಷಗಳ ಕಾಲ ನಡೆದ ಆಟದಲ್ಲಿ 21-13, 21-9ರ ಅಂತರದಲ್ಲಿ ಸಿಂಧು ಅವರನ್ನು ಮಣಿಸಿದರು.

ಗುರುವಾರದ ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ ಪಿ.ವಿ. ಸಿಂಧು ವಿಶ್ವದ 92ನೇ ರ್‍ಯಾಂಕಿಂಗ್‌ ಆಟಗಾರ್ತಿ ಮಲೇಷಿಯಾದ ಕಿಸೋನಾ ಸೆಲ್ವದುರೇ ಅವರನ್ನು ಕೇವಲ 35 ನಿಮಿಷಗಳ ಆಟದಲ್ಲಿ 21-10, 21-12 ಅಂತರದಿಂದ ಮಣಿಸಿ ಕ್ವಾರ್ಟರ್​ಫೈನಲ್​ ಪ್ರವೇಶಿಸಿದ್ದರು.

ಇದನ್ನೂ ಓದಿ:ಕೊಹ್ಲಿ ನಾಯಕತ್ವ ಬದಲಾವಣೆಯು ತಂಡದ ಸಂಸ್ಕೃತಿ ನಾಶಕ್ಕೆ ಕಾರಣ: ಬ್ರಾಡ್​ ಹಗ್

ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ 31ನೇ ರ್‍ಯಾಂಕಿಂಗ್‌ ಆಟಗಾರ ಭಾರತದ ಸಮೀರ್ ವರ್ಮಾ ಕೂಡ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಡೆನ್ಮಾರ್ಕ್‌ನ ಆ್ಯಂಡರ್ಸ್ ಆಂಟೊನ್ಸನ್ ಅವರ ಎದುರು ಸೋಲನ್ನು ಎದುರಿಸಿದರು. ಒಂದು ಗಂಟೆ 21 ನಿಮಿಷಗಳ ಸುದೀರ್ಘ ಅವಧಿಯಲ್ಲಿ ಆಂಟೊನ್ಸೆನ್ 21-13, 19-21, 22-20 ಅಂತರದಲ್ಲಿ ಸೋಲಿಸಿದರು.

ಗುರುವಾರ ಭಾರತದ ಮಿಶ್ರ ಡಬಲ್ಸ್ ಜೋಡಿ ಸಾತ್ವಿಕ್​​ ಸೈರಾಜ್ ರಾಂಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಅವರು ಮಲೇಷಿಯಾದ ಗೋಹ್ ಲಿಯು ಯಿಂಗ್ ಮತ್ತು ಚಾನ್ ಪೆಂಗ್ ಸೂನ್ ವಿರುದ್ಧ ರೋಚಕ ಗೆಲುವಿನ ನಂತರ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದು, ಪದಕ ಖಚಿತಪಡಿಸಿದ್ದಾರೆ. ಈ 18-21, 24-22, 22-20 ಅಂತರದಲ್ಲಿ ಜಯಶಾಲಿಯಾಗಿ ಹೊರಹೊಮ್ಮಿದೆ.

ABOUT THE AUTHOR

...view details