ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ ದಿನಗಣನೆ ಆರಂಭವಾಗುತ್ತಿದ್ದಂತೆ ಅತಿಥಿಗಳ ಆಹ್ವಾನದಲ್ಲಿ ದಸರಾ ಸಮಿತಿ ಬ್ಯುಸಿಯಾಗಿದೆ.
ಯುವ ದಸರಾ: ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಪಿ.ವಿ.ಸಿಂಧೂಗೆ ಆಹ್ವಾನ! - ಮೈಸೂರು ದಸರಾಗೆ ಪಿವಿ ಸಿಂಧು ಆಹ್ಚಾನ
ಈ ಬಾರಿಯ ಯುವದಸರಾ ಹಾಗೂ ದಸರಾ ಕ್ರೀಡಾಕೂಟಗಳ ಉದ್ಘಾಟನೆಗೆ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಪಿ.ವಿ.ಸಿಂಧೂ ಅವರಿಗೆ ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಆಹ್ವಾನಿಸಿದ್ದಾರೆ.
![ಯುವ ದಸರಾ: ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಪಿ.ವಿ.ಸಿಂಧೂಗೆ ಆಹ್ವಾನ!](https://etvbharatimages.akamaized.net/etvbharat/prod-images/768-512-4437584-thumbnail-3x2-giri.jpg)
ಪಿ.ವಿ.ಸಿಂಧೂರನ್ನ ಯುವ ದಸರಾಗೆ ಆಹ್ವಾನ
ಈ ಬಾರಿಯ ಯುವದಸರಾ ಹಾಗೂ ದಸರಾ ಕ್ರೀಡಾಕೂಟಗಳ ಉದ್ಘಾಟನೆಗೆ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಪಿ.ವಿ.ಸಿಂಧೂ ಅವರಿಗೆ ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಆಹ್ವಾನಿಸಿದ್ದಾರೆ.
ಹೈದರಾಬಾದ್ಗೆ ಆಗಮಿಸಿದ್ದ ಸಿಂಧೂ ಅವರನ್ನು ಭೇಟಿ ಮಾಡಿದ ಪ್ರತಾಪ್ ಸಿಂಹ, ದಸರಾಗೆ ಆಗಮಿಸಬೇಕೆಂದು ಮನವಿ ಮಾಡಿದ್ದಾರೆ. ಈ ಬಾರಿಯ ದಸರಾ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಣೆ ಹೊರಡಿಸಿದ್ದರು. ಅದರ ಬೆನ್ನಲೆ ಸಿಂಧೂ ಅವರಿಗೆ ಈ ಆಹ್ವಾನ ನೀಡಲಾಗಿದೆ.
Last Updated : Sep 14, 2019, 3:25 PM IST