ಪ್ಯಾರಿಸ್ :ಭಾರತ ಯುವ ಜೋಡಿ ಕೃಷ್ಣ ಪ್ರಸಾದ್ ಗರಗ ಮತ್ತು ವಿಷ್ಣುವರ್ಧನ್ ಗೌಡ್ ಪಂಜಾಲಾ ಜೋಡಿ ಪ್ಯಾರಿಸ್ನಲ್ಲಿ ನಡೆಯುತ್ತಿರುವ ಒರ್ಲಿಯನ್ಸ್ ಮಾಸ್ಟರ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ.
ಫೈನಲ್ ಪಂದ್ಯದಲ್ಲಿ ಭಾರತದ ಜೋಡಿ ಕೇವಲ 35 ನಿಮಿಷಗಳಲ್ಲಿ ಇಂಗ್ಲೆಂಡ್ನ ಕಾಲುಮ್ ಹೆಮ್ಮಿಂಗ್ಸ್ ಮತ್ತು ಸ್ಟೆವೆನ್ ಸ್ಟಾಲ್ವುಡ್ ಜೋಡಿಯ ವಿರುದ್ಧ 21-17, 21-17ರಲ್ಲಿ ಅಂತರದಲ್ಲಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ.
ಈ ಜೋಡಿ ಇದೇ ಮೊದಲ ಬಾರಿಗೆ ಡಬಲ್ಸ್ನಲ್ಲಿ ಜೊತೆಯಾಗಿ ಆಡುತ್ತಿದೆ. ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ತೋರಿರುವ ಯುವ ಪ್ರತಿಭೆಗಳು ಪ್ರಶಸ್ತಿ ಸುತ್ತಿನಲ್ಲಿ ಇಂಗ್ಲೆಂಡ್ನ ಸೀನ್ ವೆಂಡಿ ಮತ್ತು ಬೆನ್ ಲೇನ್ ವಿರುದ್ಧ ಸೆಣಸಾಡಲಿದ್ದಾರೆ.