ಒರ್ಲಿಯನ್ಸ್ ಓಪನ್ :ಭಾರತದ ಯುವ ಜೋಡಿ ಕೃಷ್ಣಪ್ರಸಾದ್ ಮತ್ತು ವಿಷ್ಣುವರ್ಧನ್ ಗೌಡ್ ಪಂಜಾಲ ಒರ್ಲಿಯನ್ಸ್ ಓಪನ್ ಫೈನಲ್ ಪಂದ್ಯದಲ್ಲಿ ರೋಚಕ ಹೋರಾಟದ ಹೊರೆತಾಗಿಯೂ ಫೈನಲ್ನಲ್ಲಿ ಸೋಲುಂಡಿದ್ದಾರೆ.
ಇದೇ ಮೊದಲ ಬಾರಿಗೆ ಜೋಡಿಯಾಗಿ ಸ್ಪರ್ಧಿಸಿದ್ದ ಈ ಜೋಡಿ ಇಂಗ್ಲೆಂಡ್ನ ಸೀನ್ ವೆಂಡಿ ಮತ್ತು ಬೆನ್ ಲೇನ್ ವಿರುದ್ಧ 21-19,14-21,19-21ರಲ್ಲಿ ಸೋಲು ಕಂಡು ಚೊಚ್ಚಲ ಡಬಲ್ಸ್ ಟ್ರೋಫಿ ಮಿಸ್ ಮಾಡಿಕೊಂಡಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲ ಗೇಮ್ನಲ್ಲಿ ಗೆಲುವು ಸಾಧಿಸಿದ ಭಾರತೀಯ ಜೋಡಿ 2ನೇ ಗೇಮ್ನಲ್ಲಿ ಸೋಲು ಕಂಡಿತು. ಆದರೆ, 3ನೇ ಗೇಮ್ನಲ್ಲಿ 19-18ರಲ್ಲಿ ಮುನ್ನಡೆ ಸಾಧಿಸಿದರಾದರೂ ಒತ್ತಡಕ್ಕೊಳಗಾಗಿ 19-21ರಲ್ಲಿ ಸೋಲು ಕಂಡು ನಿರಾಶೆ ಅನುಭವಿಸಿದರು.