ಕರ್ನಾಟಕ

karnataka

ETV Bharat / sports

ಥಾಯ್ಲೆಂಡ್​ ಓಪನ್​: ನಾಳೆ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್​ಗೆ ಮರಳಲಿದ್ದಾರೆ ಸಿಂಧು, ಸೈನಾ - ಸೈನಾ ನೆಹ್ವಾಲ್​

ಒಲಿಂಪಿಕ್​ ಸಿಲ್ವರ್​ ಮೆಡಿಲಿಸ್ಟ್ ಆಗಿರುವ ಸಿಂಧು ಕಳೆದ ಎರಡು ತಿಂಗಳಿನಿಂದ ಲಂಡನ್​ನಲ್ಲಿ ತರಬೇತಿ ಪಡೆದಿದ್ದು, ಉತ್ತಮ ಲಯದಲ್ಲಿದ್ದಾರೆ. ಆದರೆ ಸೈನಾ ಇತ್ತೀಚೆಗೆ ಕೋವಿಡ್ 19ನಿಂದ ಚೇತರಿಸಿಕೊಂಡಿದ್ದು, ಸರಣಿಯಲ್ಲಿ ಕಠಿಣ ಪೈಪೋಟಿ ಎದುರಿಸಬೇಕಾಗಿದೆ.

ಥಾಯ್ಲೆಂಡ್​ ಓಪನ್ 2021
ಪಿವಿ ಸಿಂಧು - ಸೈನಾ ನೆಹ್ವಾಲ್​

By

Published : Jan 11, 2021, 9:23 PM IST

ಬ್ಯಾಂಕಾಕ್​: ಕೋವಿಡ್​ 19 ಅಂತಾರಾಷ್ಟ್ರೀಯ ಕ್ಯಾಲೆಂಡರ್​​ಗೆ ಅಡ್ಡಿಪಡಿಸಿದ ಸುಮಾರು 10 ತಿಂಗಳ ನಂತರ ಭಾರತದ ಸ್ಟಾರ್ ಶಟ್ಲರ್​ಗಳಾದ ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್​ ಅವರು ಮಂಗಳವಾರದಿಂದ ಪ್ರಾರಂಭವಾಗುವ ಯೋನೆಕ್ಸ್​ ಥೈಲ್ಯಾಂಡ್ ಓಪನ್ ಸೂಪರ್ 1000 ಟೂರ್ನಿಯಲ್ಲಿ ಮತ್ತೆ ಮರಳಲಿದ್ದಾರೆ.

ಒಲಿಂಪಿಕ್​ ಸಿಲ್ವರ್​ ಮೆಡಿಲಿಸ್ಟ್ ಆಗಿರುವ ಸಿಂಧು ಕಳೆದ ಎರಡು ತಿಂಗಳಿನಿಂದ ಲಂಡನ್​ನಲ್ಲಿ ತರಬೇತಿ ಪಡೆದಿದ್ದು, ಉತ್ತಮ ಲಯದಲ್ಲಿದ್ದಾರೆ. ಆದರೆ ಸೈನಾ ಇತ್ತೀಚೆಗೆ ಕೋವಿಡ್ 19ನಿಂದ ಚೇತರಿಸಿಕೊಂಡಿದ್ದು, ಸರಣಿಯಲ್ಲಿ ಕಠಿಣ ಪೈಪೋಟಿ ಎದುರಿಸಬೇಕಾಗಿದೆ.

ಜನವರಿ 12 - 17ರವರೆಗೆ ಯೋನೆಕ್ಸ್​ ಥಾಯ್ಲೆಂಡ್ ಓಪನ್ ಮತ್ತು ಜನವರಿ 19ರಿಂದ 24ರವರೆಗೆ ಟೊಯೋಟೋ ಥಾಯ್ಲೆಂಡ್ ಓಪನ್​ ಟೂರ್ನಮೆಂಟ್ ನಡೆಯಲಿದೆ.

ಮಂಗಳವಾರ ನಡೆಯಲಿರುವ ಯೋನೆಕ್ಸ್​ ಥಾಯ್ಲೆಂಡ್ ಓಪನ್​ನ ತಮ್ಮ ಮೊದಲ ಪಂದ್ಯದಲ್ಲಿ ಸಿಂಧು ಡೆನ್ಮಾರ್ಕ್​ನ ಮಿಯಾ ಬ್ಲಿಚ್​ಫೆಲ್ಡ್​ ಅವರನ್ನು ಮತ್ತು ಸೈನಾ ನೆಹ್ವಾಲ್​ ಟೂರ್ನಿಯಲ್ಲಿ ಮಲೇಷ್ಯಾದ ಕಿಸೋನಾ ಸೆಲ್ವಾಡುರೆ ಸವಾಲನ್ನು ಎದುರಿಸಲಿದ್ದಾರೆ.

ಸಿಂಧು ಬ್ಲಿಚ್​ಫೆಲ್ಡ್ ವಿರುದ್ಧ 3-0ಯಲ್ಲಿ ಗೆಲುವಿನ ಅಂತರ ಕಾಯ್ದುಕೊಂಡಿರುವುದರಿಂದ ಈ ಪಂದ್ಯದಲ್ಲಿ ಸುಲಭ ಜಯದ ನಿರೀಕ್ಷೆಯಲ್ಲಿದ್ದಾರೆ.

ABOUT THE AUTHOR

...view details