ಹೈದರಾಬಾದ್: ಭಾರತದ ಮಂಚೂಣಿ ಬ್ಯಾಡ್ಮಿಂಟನ್ ಪಟು ಪಿವಿ ಸಿಂಧು ಜನವರಿಗೆ ಮುಂದೂಡಲ್ಪಟ್ಟಿರುವ ವರ್ಲ್ಡ್ ಟೂರ್ ಫೈನಲ್‌ಗೆ ನೇರ ಅರ್ಹತೆ ಪಡೆಯುವುದರಿಂದ ವಂಚಿತರಾಗಿದ್ದಾರೆ.
ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ನಿಯಮಗಳ ಪ್ರಕಾರ ವಿಶ್ವಚಾಂಪಿಯನ್ಗಳು ವರ್ಲ್ಡ್ ಟೂರ್ ಫೈನಲ್‌ಗೆ ನೇರ ಅರ್ಹತೆ ಪಡೆಯುತ್ತಿದ್ದರು. ಆದರೆ, ಕೋವಿಡ್ 19 ಸಾಂಕ್ರಾಮಿಕ ರೋಗವು ಅಂತಾರಾಷ್ಟ್ರೀಯ ಕ್ಯಾಲೆಂಡರ್ಗೆ ಅಡ್ಡಿ ಪಡಿಸಿದೆ. ಹಾಗಾಗಿ ಬೋರ್ಡ್ ಕೆಲವು ಮಾನದಂಡಗಳನ್ನು ಬದಲಾಯಿಸಲು ನಿರ್ಧರಿಸಿದೆ. ವರ್ಲ್ಡ್ ಟೂರ್ ಫೈನಲ್ 2021ರ ಜನವರಿ 27-31 ರಿಂದ ಆರಂಭವಾಗಲಿದೆ.
ಬ್ಯಾಂಕಾಕ್ (ಥಾಯ್ಲೆಂಡ್) ನಲ್ಲಿ ನಡೆಯುವ ಎಚ್‌ಎಸ್‌ಬಿಸಿ ಬಿಡಬ್ಲ್ಯುಎಫ್ 'ವರ್ಲ್ಡ್ ಟೂರ್ ಫೈನಲ್ಸ್ 2020'ಗೆ ಪ್ರಸ್ತುತ ನಿಯಮಗಳ ಪ್ರಕಾರ ಆಟಗಾರರು ಅರ್ಹತೆ ಪಡೆಯುತ್ತಾರೆ. ಇದಕ್ಕೆ ಹೊರತಾಗಿ ಪ್ರಸ್ತುತ ವಿಶ್ವದ ಯಾವುದೇ ಚಾಂಪಿಯನ್ಗಳು ನೇರ ಅರ್ಹತೆ ಪಡೆಯುವುದಿಲ್ಲ. ಮತ್ತು ವಿಶ್ವ ಪ್ರವಾಸಗಳಿಂದ ಗಳಿಸಿದ ಅಂಕಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಬಿಡಬ್ಲ್ಯೂಎಫ್ ಭಾನುವಾರ ಪ್ರಕಟಣೆ ತಿಳಿಸಿದೆ.