ಟೋಕಿಯೋ: ವಿಶ್ವದ ನಂಬರ್ 1 ಶ್ರೇಯಾಂಕದ ಬ್ಯಾಡ್ಮಿಂಟನ್ ಆಟಗಾರ ಕೆಂಟೊ ಮೊಮೊಟ ಕೋವಿಡ್ 19 ಪಾಸಿಟಿವ್ ದೃಡಪಟ್ಟು 10 ದಿನ ಕಳೆದ ನಂತರ ಮತ್ತೆ ತರಭೇತಿ ಅಭ್ಯಾಸ ಆರಂಭಿಸಿದ್ದಾರೆ.
ಮೊಮೊಟಾ 10 ದಿನಗಳ ಕಾಲ ಐಸೊಲೇಸನ್ ಮುಗಿಸಿದ ನಂತರ ಸ್ವತಃ ಅಭ್ಯಾಸಕ್ಕೆ ಮರಳಿದ್ದಾರೆ ಎಂದು ಜಪಾನ್‌ನ ಸ್ಟೇಟ್ ಬ್ರಾಡ್ಕಾಸ್ಟರ್ ಎನ್‌ಎಚ್‌ಕೆ ತಿಳಿಸಿದೆ. " ನಾನು ಉತ್ತಮ ಆಕಾರವನ್ನು ಮರಳಿ ಪಡೆದುಕೊಳ್ಳಲು ನನ್ನ ಕೈಲಾದಷ್ಟು ಶ್ರಮಿಸಲು ಬಯಸುತ್ತೇನೆ" ಎಂದು ಮೊಮೊಟ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
26 ವರ್ಷದ ಅಗ್ರ ಶ್ರೇಯಾಂಕದ ಆಟಗಾರ ಬ್ಯಾಂಕಾಕ್ಗೆ ತೆರಳುವ ಮುನ್ನ ಟೋಕಿಯೋದ ನರಿಟಾ ವಿಮಾನ ನಿಲ್ದಾಣದಲ್ಲಿ ನಡೆಸಿದ ಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿತ್ತು. ಈ ಕಾರಣದಿಂದ ಅವರ ಜೊತೆ ಇಡೀ ತಂಡವೇ ಥಾಯ್ಲೆಂಡ್ ಓಪನ್ನಿಂದ ಹಿಂದಕ್ಕೆ ಸರಿದಿತ್ತು. ಇದೀಗ 10 ದಿನಗಳ ನಂತರ ಮೊಮೊಟ ಅವರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಾಣದಿದ್ದರಿಂದ ಗುರುವಾರ ಟೋಕಿಯೋ ಆರೋಗ್ಯ ಕೇಂದ್ರದಿಂದ ತಮ್ಮ ಮನೆಗೆ ಮರಳಿದ್ದರು.
ಇದನ್ನು ಓದಿ:ಸಿಡ್ನಿಯಲ್ಲಿ ಭಾರತೀಯ ಅಭಿಮಾನಿಗೂ ಜನಾಂಗೀಯ ನಿಂದನೆ: ದೂರು ದಾಖಲು