ಕರ್ನಾಟಕ

karnataka

ETV Bharat / sports

ಮಲೇಷ್ಯಾ ಮಾಸ್ಟರ್​: ಎರಡನೇ ಸುತ್ತು ಪ್ರವೇಶಿಸಿದ ಪಿವಿ ಸಿಂಧು - ಸೈನಾ ನೆಹ್ವಾಲ್​

ಒಲಿಂಪಿಕ್​ ಬೆಳ್ಳಿಪದಕ ವಿಜೇತೆ ಪಿವಿ ಸಿಂಧು ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ರಷ್ಯಾದ ಎವ್ಗೆನಿಯಾ ಕೊಸೆಟ್ಸಾಕಾಯಾ ವಿರುದ್ಧ 21-15, 21-13ರಲ್ಲಿ ಗೆಲುವು ಸಾಧಿಸಿದರು. ಸಿಂಧು ಎವ್ಗೆನಿಯಾರನ್ನು ಕೇವಲ 35 ನಿಮಿಷಗಳಲ್ಲಿ ಮಣಿಸಿ ಎರಡನೇ ಸುತ್ತು ಪ್ರವೇಸಿದರು.

Malaysia Masters
Malaysia Masters

By

Published : Jan 8, 2020, 7:57 PM IST

ಕ್ವಾಲಾಲಂಪುರ:ಭಾರತದ ನಂಬರ್​ ಒನ್​ ಬ್ಯಾಡ್ಮಿಂಟನ್​ ಆಟಗಾರ್ತಿ ಪಿವಿ ಸಿಂಧು ಮಲೇಷ್ಯಾ ಮಾಸ್ಟರ್​ ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಒಲಿಂಪಿಕ್​ ಬೆಳ್ಳಿಪದಕ ವಿಜೇತೆ ಪಿವಿ ಸಿಂಧು ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ರಷ್ಯಾದ ಎವ್ಗೆನಿಯಾ ಕೊಸೆಟ್ಸಾಕಾಯಾ ವಿರುದ್ಧ 21-15, 21-13ರಲ್ಲಿ ಗೆಲುವು ಸಾಧಿಸಿದರು. ಸಿಂಧು ಎವ್ಗೆನಿಯಾರನ್ನು ಕೇವಲ 35 ನಿಮಿಷಗಳಲ್ಲಿ ಮಣಿಸಿ ಎರಡನೇ ಸುತ್ತು ಪ್ರವೇಸಿದರು.

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಸೈನಾ ನೆಹ್ವಾಲ್​ ಬೆಲ್ಜಿಯಂನ ಲಿಯಾನ್ನೆ ತಾನ್​ ಅವರನ್ನು 21-15,21-17ರಲ್ಲಿ ಮಣಿಸಿ ದ್ವಿತೀಯ ಸುತ್ತಿಗೆ ಪ್ರವೇಶ ಪಡೆದರು.

ಆದರೆ ಪುರುಷರ ವಿಭಾಗದಲ್ಲಿ ಕಿಡಂಬಿ ಶ್ರೀಕಾಂತ್​ ಅವರು ಚೀನಾದ ತೈಪೆಯ ಚೋ ತೈನ್​ ಚೆನ್ ವಿರುದ್ಧ ಸೋಲನುಭವಿಸಿ ನಿರಾಶೆ ಅನುಭವಿಸಿದರು. ಶ್ರೀಕಾಂತ್​​ 17-21, 5-21 ರಲ್ಲಿ ತೈನ್ ಚೆನ್​​ಗೆ ಶರಣಾದರೆ, ಸಾಯಿ ಪ್ರಣೀತ್ ಡೆನ್ಮಾರ್ಕ್​ನ ರಾಸ್ಮಸ್​ ಗೆಮ್ಕೆ ವಿರುದ್ಧ 21-11, 21-15ರಲ್ಲಿ ಸೋಲನುಭವಿಸಿದರು.

ABOUT THE AUTHOR

...view details