ಡೆನ್ಮಾರ್ಕ್: ಭಾರತೀಯ ಯುವ ಶೆಟ್ಲರ್ ಲಕ್ಷ್ಯ ಸೇನ್ ಮಂಗಳವಾರ ಫ್ರಾನ್ಸ್ನ ಕ್ರಿಸ್ಟೋ ಪೊಪೊವ್ ಅವರನ್ನು ನೇರ ಗೇಮ್ಗಳಲ್ಲಿ ಮಣಿಸುವ ಮೂಲಕ ಡೆನ್ಮಾರ್ಕ್ ಓಪನ್ನಲ್ಲಿ 2ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.
ಪೊಪೊವ್ ವಿರುದ್ಧ 3-1ರ ಗೆಲುವಿನ ಅಂತರ ಹೊಂದಿರುವ ಸೇನ್ ಮಂಗಳವಾರ ಪಂದ್ಯದಲ್ಲಿ ಫ್ರೆಂಚ್ ಆಟಗಾರನ ವಿರುದ್ಧ 21-9, 21-15ರ ಗೇಮ್ಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಸೇನ್ ಈ ಪಂದ್ಯವನ್ನು ಕೇವಲ 36 ನಿಮಿಷಗಳಲ್ಲಿ ಗೆಲ್ಲುವ ಮೂಲಕ ಸೂಪರ್ 750 ಟೂರ್ನಿಯ ಮುಂದಿನ ಸುತ್ತಿಗೆ ತೇರ್ಗಡೆಗೊಂಡಿದ್ದಾರೆ.